ಟಿ.ಪಿ.ಚಂದ್ರ ಶೇಖರ(ಪುಟ್ಟ) ಪೂಜಾರಿಮನೆ ತಳೂರು ನಿಧನ

0

ದೇವಚಳ್ಳ ಗ್ರಾಮದ ತಳೂರು ಪೂಜಾರಿಮನೆ ಟಿ. ಪಿ. ಚಂದ್ರಶೇಖರ (ಪುಟ್ಟ) ಎಂಬವರು ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.

ಚಂದ್ರಶೇಖರ ರವರು ಇಂದು ಮಧ್ಯಾಹ್ನ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಮನೆಯವರು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿಯೂ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆಯ ವೇಳೆಗೆ ಕೊನೆಯುಸಿರೆಳೆದರು.

ಚಂದ್ರಶೇಖರರವರು ತಳೂರು ರಾಜ್ಯ ದೈವ ಮತ್ತು ಪುರುಷ ದೈವದ ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಸ್ನೇಹ ಯುವಕ ಮಂಡಲದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ಥಳೀಯ ಸಂಘಟನೆಗಳಲ್ಲಿಯೂ ತೊಡಗಿಸಿಕೊಂಡು, ಊರಿನಲ್ಲಿ ಜನಾನುರಾಗಿಯಾಗಿದ್ದರು.

ಮೃತರು ಪತ್ನಿ ವೀಣಾಕುಮಾರಿ, ಪುತ್ರಿ ಹಿತಾಶ್ರೀ ಟಿ. ಪಿ., ಪುತ್ರ ಪ್ರಣವ್ ಟಿ. ಪಿ. ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.