ಸುಳ್ಯ ಪಟ್ಟಣ ಪಂಚಾಯತ್‌ನ ನಗರ ಆಶ್ರಯ ಸಮಿತಿಗೆ ನೂತನ ಸದಸ್ಯರನ್ನಾಗಿ ನಾಲ್ವರನ್ನು ನಾಮನಿರ್ದೇಶನಗೊಳಿಸಲಾಗಿದೆ. ನಿತಿನ್ ಕೊಯಿಂಗೋಡಿ, ಮಾಧವ ಜಟ್ಟಿಪಳ್ಳ, ಮಹಮ್ಮದ್ ಮುಟ್ಟೆತ್ತೋಡಿ, ಉಷಾ ಭಸ್ಮಡ್ಕರವರನ್ನು ನಾಮನಿರ್ದೇಶನಗೊಳಿಸಲಾಗಿದೆ. ವಸತಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ನಗರ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಆಯ್ಕೆಗೊಳಿಸುವ ಸಲುವಾಗಿ ಸಮಿತಿಯನ್ನು ರಚಿಸಲಾಗಿದೆ.