ಸುಳ್ಯದಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ವರ್ಣ’

0

ಸುಳ್ಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಲಯನ್ಸ್ ಪ್ರಾಂತ 5ರ ಪ್ರಾಂತೀಯ ಸಮ್ಮೇಳನ ‘ವರ್ಣ’ ಫೆ.22ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಎಸ್. ಸಮ್ಮೇಳನದ ಅಧ್ಯಕ್ಷತೆ ವಹಿಸಿದರೆ, ಪ್ರಾಂತೀಯ ಅಧ್ಯಕ್ಷರ ಪತ್ನಿ ಪ್ರಾಂತ್ಯದ ಪ್ರಥಮ ಮಹಿಳೆ ವೇದಾವತಿ ಜಿ. ರೈ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲಯನ್ಸ್ ಮಾಜಿ ಮಲ್ಟಿಪಲ್ ಕೌನ್ಸಿಲ್ ಚೆಯರ್‌ಮೆನ್ ವಸಂತಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ. ಬಿ ಸದಾಶಿವ ಅತಿಥಿಯಾಗಿ ಭಾಗವಹಿಸಿ, ಸನ್ಮಾನಿತರಿಗೆ ಅಭಿನಂದನಾ ನುಡಿಗಳನ್ನಾಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿದ್ದ ಪ್ರಾಂತೀಯ ಸಮ್ಮೇಳನ ಸಂಘಟನಾ‌ ಸಮಿತಿಯ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸ್ವಾಗತಿಸಿದರು. ಪ್ರಾಂತ್ಯ ರಾಯಭಾರಿ ರೇಣುಕಾ ಸದಾನಂದ ಜಾಕೆ ಲ. ಗಂಗಾಧರ ರೈ ದಂಪತಿಗಳನ್ನು ಪರಿಚಯಿಸಿದರು. ವಲಯ 1ರ ಅಧ್ಯಕ್ಷೆ ರೂಪಶ್ರೀ ಜೆ ರೈ ಮತ್ತು ವಲಯ 2ರ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್ ಬ್ಯಾನರ್ ಪ್ರಸಂಟೇಷನ್ ಸಂಧರ್ಭದಲ್ಲಿ ಪ್ರಾಂತ್ಯ ಕ್ಲಬ್‌ಗಳ ಸಾಧನೆಗಳನ್ನು ವಿವರಿಸಿದರು. ವಲಯ 1ರ ಪ್ರತಿನಿಧಿ ಅಮೃತ ಅಪ್ಪಣ್ಣ, ವಲಯ 2ರ ಪ್ರತಿನಿಧಿ ದಿನೇಶ್ ಆಚಾರ್ಯ, ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಖಜಾಂಜಿ ರಮೇಶ್ ಶೆಟ್ಟಿ, ವಲಯಾಧಕ್ಷರುಗಳಾದ ಲ. ವೇಣಿ ಮರೋಳಿ, ಲ. ಬಿ. ಪವನ್ ರಾಮ್, ಲ. ಸುಜಿತ್ ಎಸ್. ಸಾಲ್ಯಾನ್ ಲ. ವೆಂಕಟೇಶ್ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವೇದಿಕೆಯಲ್ಲಿದ್ದ ಖಜಾಂಜಿ ದೊಡ್ಡಣ್ಣ ಬರೆಮೇಲು ಲಕ್ಕಿ ವಿನ್ನರ್ಸ್ ಮತ್ತು 100% ರಿಜಿಸ್ಟ್ರೇಷನ್ ಕ್ಲಬ್ ಗಳ ಪಟ್ಟಿ ವಾಚಿಸಿದರು.
ಸಮ್ಮೇಳನದ ಅಂಗವಾಗಿ
ಪ್ರಾಂತ್ಯದ ಎಲ್ಲಾ ಕ್ಲಬ್‌ಗಳ ಬ್ಯಾನರ್ ಪ್ರೆಸೆಂಟೇಷನ್
ಫನ್ನಿ ಗೇಮ್ಸ್, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಂತ್ಯದ 7 ಕ್ಲಬ್‌ಗಳ ವ್ಯಾಪ್ತಿಯಲ್ಲಿ ವಿಶೇಷ ಸಾಧನೆ ಮಾಡಿದ 7 ಮಂದಿ ಲಯನೇತರ ಸಾಧಕರಾದ ಪಾಕಶಾಸ್ತ್ರಜ್ಞ ಪ್ರಸಾದ್ ಅರ್ನಾಡಿ ಬೆಳ್ಳಾರೆ, ಯೂಟ್ಯೂಬರ್ ವಿ.ಜೆ. ವಿಖ್ಯಾತ್ ಸುಳ್ಯ, ಶೈಕ್ಷಣಿಕ ಸಾಧಕಿ ಶ್ರಾವ್ಯ ಮುತ್ಲಾಜೆ ಗುತ್ತಿಗಾರು, ದೈವನರ್ತಕ ಬೊಳಿಯ ಅಜಿಲ ಸುಬ್ರಹ್ಮಣ್ಯ, ಸಮಾಜ ಸೇವಕ ಪವನ್ ಪಲ್ಲತ್ತಡ್ಕ ಪಂಜ, ಸಾಹಿತ್ಯ ಸಾಧಕಿ ಸಂಗೀತ ರವಿರಾಜ್ ಸಂಪಾಜೆ ಮತ್ತು ಭರತನಾಟ್ಯ ವಿದುಷಿ ಮಾನಸ ಪುನೀತ್ ರೈ ಕಡಬ ಇವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.


ಲ. ವೀಣಾ ಪ್ರಸಾದ್ ಲಯನ್ ಪ್ರಾರ್ಥನೆ ವಾಚಿಸಿದರು. ಲ. ತೇಜಸ್ವಿನಿ ಕಿರಣೆ ಧ್ವಜವಂದನೆ ಸಲ್ಲಿಸಿದರು.
ಬಳಿಕ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದ ಎನ್.ಎಂ.ಸಿ. ಎನ್.ಸಿ.ಸಿ. ವಿದ್ಯಾರ್ಥಿ ಚೇತನ್ ಕೆ ರಾಷ್ಟ್ರ ಧ್ವಜವನ್ನು ವೇದಿಕೆಗೆ ತಂದರು. ಲ. ಬಾಲಚಂದ್ರ ಗೌಡ ಮುಖ್ಯ ಅತಿಥಿ ವಸಂತ ಕುಮಾರ್ ಶೆಟ್ಟಿಯವರನ್ನು ಮತ್ತು ಸಂಘಟನಾ ಸಮಿತಿಯ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ ರಮೇಶ್ ಬಿ.ಇ ಯವರನ್ನು ಪರಿಚಯಿಸಿದರು. ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈ ಮತ್ತು ಶ್ರೀಮತಿ ವೇದಾವತಿ ಜಿ. ಶೆಟ್ಟಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಲ. ಅಮೃತ ಅಪ್ಪಣ್ಣ ಲ. ಗಂಗಾಧರ ರೈ ದಂಪತಿಯ ಸನ್ಮಾನ ಪತ್ರ ವಾಚಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ, ಚೀಫ್ ಡಿಸ್ಟ್ರಿಕ್ಟ್ ಕೋ ಆರ್ಡಿನೇಟರ್ ಲ. ಗೋವರ್ಧನ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಶ್ರೀಮತಿ ಗೀತಾ ಎಸ್. ಶೆಟ್ಟಿ ಮತ್ತು ರೀಟಾ ಕರುಂಬಯ್ಯ ಕಾರ್ಯಕ್ರಮ ನಿರೂಪಿಸಿ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.