ಅಜ್ಜಾವರ ಗ್ರಾಮದ ಮೇನಾಲದಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವಕನಿಗೆ ಕಾಡು ಹಂದಿ ಅಡ್ಡಬಂದ ಸ್ಕೂಟಿ ಪಲ್ಟಿಯಾಗಿ ಯುವಕನಿಗೆ ಗಾಯವಾದ ಘಟನೆ ವರದಿಯಾಗಿದೆ.
ಮೇನಾಲದಲ್ಲಿ ಫಾಸ್ಟ್ ಫುಡ್ ನಡೆಸುತ್ತಿರುವ ಭಾಸ್ಕರರವರು ಫೆ.27ರಂದು ರಾತ್ರಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ರಬ್ಬರ್ ಕೂಪ್ ಒಳಗಿನಿಂದ ದೊಡ್ಡ ಗಾತ್ರದ ಹಂದಿಯೊಂದು ರಸ್ತೆಗೆ ಬಂತೆಂದೂ ಅದೇ ಸಮಯಕ್ಕೆ ಸ್ಕೂಟಿಯೂ ಬಂದು ಹಂದಿ ಗುದ್ದಿತೆನ್ನಲಾಗಿದೆ. ಹಂದಿ ವಾಪಾಸು ರಬ್ಬರ್ ಕೂಪ್ ಹತ್ತಿ ಹೋಯಿತೆಂದು ತಿಳಿದುಬಂದಿದೆ.
ಪರಿಣಾಮ ಭಾಸ್ಕರರಿಗೆ ಕೈ ಗೆ ಗಾಯವಾಗಿದೆ. ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆದಿದ್ದಾರೆ.