ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಫೆ.27 ರಂದು ನಡೆಯಿತು.
ದೇವಸ್ಥಾನದ ಅರ್ಚಕ ಶಿವಪ್ರಸಾದ್ ಕೆದಿಲಾಯ ರವರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು, ಸದಸ್ಯರಾದ ರಾಧಾಕೃಷ್ಣ ಕೋಲ್ಚಾರು, ತಂಗವೇಲು ನಾಗಪಟ್ಟಣ ಹಾಗೂ ಉಲ್ಲಾಸ್ ಕುದ್ಕುಳಿ, ಭಜನಾ ಸಂಘದ ಅಧ್ಯಕ್ಷ ಹೂವಾನಂದ ಬಾರ್ಪಣೆ,ಉಮೇಶ್ ಬೂಡುಪನ್ನೆ, ಶರತ್ ಗುಡ್ಡೆಮನೆ, ರಾಮ್ ಸುಂದರಮ್ ನಾಗಪಟ್ಟಣ, ಭರತ್ ಕುದ್ಕುಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


