Home Uncategorized ಸುಬ್ರಹ್ಮಣ್ಯ: ವಸತಿ ಗೃಹದ ಸೆಕ್ಯೂರಿಟಿ 4 ತಿಂಗಳುಗಳಿಂದ ನಾಪತ್ತೆ

ಸುಬ್ರಹ್ಮಣ್ಯ: ವಸತಿ ಗೃಹದ ಸೆಕ್ಯೂರಿಟಿ 4 ತಿಂಗಳುಗಳಿಂದ ನಾಪತ್ತೆ

0

ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಪ್ರಕಟಣೆ

ಕುಕ್ಕೆ ಸುಬ್ರಹ್ಮಣ್ಯ ಮಠದ ಬಾಬ್ತು ವ್ಯಾಸಮಂದಿರ ವಸತಿ ಗೃಹದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ರವಿಕುಮಾರ್ ಎಂಬುವವರು ಕಳೆದ 4 ತಿಂಗಳ ಹಿಂದೆ ಕಾಣೆಯಾಗಿದ್ದು ಇವರನ್ನು ಎಲ್ಲಿಯಾದರು ಕಂಡು ಬಂದಲ್ಲಿ ಕೊಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ನೀಡಿದೆ.

ದಿನಾಂಕ:31-10-2024 ರಂದು ಬೆಳಿಗ್ಗೆ 04:00 ಗಂಟೆಗೆ ಗುರುವಾಯೂರಿಗೆ ಹೋಗುತ್ತೇನೆಂದು ಹೇಳಿ ಹೋದವರು ಈ ವರೆಗೂ ವಾಪಸ್ಸು ಮನೆಗೆ ಬಾರದೇ ಇದ್ದು, ಈ ವರೆಗೆ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2024 ಕಲಂ ಗಂಡಸು ಕಾಣೆ ರಂತೆ ಪ್ರಕರಣ ದಾಖಲಾಗಿರುತ್ತದೆ.

ಚಹರೆ ಗುರುತು
ಮೈ ಬಣ್ಣ : ಕಪ್ಪು
ಮೈ ಕಟ್ಟು ಸಾಧಾರಣ ಶರೀರ,ಮಾತನಾಡುವ ಭಾಷೆ: ಕನ್ನಡ ತುಳು ಹಿಂದಿ
ಎತ್ತರ: 5.5. ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ಅಥವಾ ದಕ್ಷಿಣ ಕನ್ನಡ ಜಿಲ್ಲಾ ಕಂಟ್ರೋಲ್‌ ರೂಂ ಗೆ ಮಾಹಿತಿ ನೀಡುವಂತೆ ತಿಳಿಸಿದೆ.

NO COMMENTS

error: Content is protected !!
Breaking