ಸುಳ್ಯದ ಫುಟ್ಬಾತ್ ಗಳಲ್ಲಿ ಅಕ್ರಮವಾಗಿ ನಡೆಯುವ ತರಕಾರಿ ವ್ಯಾಪಾರವನ್ನು ನಿಲ್ಲಿಸುವಂತೆ ನಗರ ಪಂಚಾಯತ್ ಗೆ ಮನವಿ

0

ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ತರಕಾರಿ ಅಂಗಡಿ ವ್ಯಾಪಾರಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ಫುಟ್ಪಾತ್ ಗಳಲ್ಲಿ ಕೆಲವರು ನಿಯಮ ಪಾಲಿಸದೆ ತರಕಾರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು ಇದರಿಂದ ನಗರ ಪರಿಸರದಲ್ಲಿ ಅಂಗಡಿಗಳನ್ನು ಇಟ್ಟು ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತಿದೆ.ಕೂಡಲೇ ಕ್ರಮ ಕೈ ಗೊಳ್ಳ ಬೇಕೆಂದು ಸುಳ್ಯ ಪರಿಸರದ ತರಕಾರಿ ಮತ್ತು ಹಣ್ಣು ಹಂಪಲು ಅಂಗಡಿಯ ಮಾಲಕರುಗಳು ಫೆ 27 ರಂದು ಸುಳ್ಯ ನಗರ ಪಂಚಾಯತ್ ಮುಖ್ಯ ಅಧಿಕಾರಿಯವರಿಗೆ ಮನವಿ ನೀಡಿದ್ದಾರೆ.

ಮನವಿಯಲ್ಲಿ ಉಲ್ಲೇಖಿಸಿರುವ ಅವರು ಈ ಬಗ್ಗೆ ಈ ಮೊದಲು ನಗರ ಪಂಚಾಯಿತಿಗೆ ದೂರುಗಳನ್ನು ನೀಡಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಲ್ಲದೆ ಬೀದಿ ಬದಿಯ ಫುಟ್ಬಾತ್ ಗಳಲ್ಲಿ ಜನರಿಗೆ ನಡೆದಾಡಲು ಸಮಸ್ಯೆ ಆಗುತಿದ್ದು,ಅಲ್ಲದೆ ಕಸ ಕಡ್ಡಿಗಳನ್ನು ರಸ್ತೆ ಬದಿಯಲ್ಲಿ ಹಾಕಿ ಹೋಗುತ್ತಿದ್ದು ಮತ್ತು ನಗರ ಪಂಚಾಯತಿಗೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡದೆ ಅಕ್ರಮವಾಗಿ ವ್ಯಾಪಾರವನ್ನು ಮಾಡುತ್ತಿದ್ದಾರೆ.

ಆದುದರಿಂದ ಅವರ ಮೇಲೆ ಕೊಡಲೇ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ನಗರ ಪಂಚಾಯತ್ ಮುಂಬಾಗದಲ್ಲಿ ಧರಣಿ ನಡೆಸುವುದಾಗಿ ಅಂಗಡಿಯ ಮಾಲಕರುಗಳು ಮನವಿಯಲ್ಲಿ ಎಚ್ಚರಿಕೆಯನ್ನು ನೀಡಿರುತ್ತಾರೆ.

ಈ ಸಂಧರ್ಭದಲ್ಲಿ ಸುಮಾರು 20 ಕ್ಕೂ ಹೆಚ್ಚು ತರಕಾರಿ ಹಾಗೂ ಹಣ್ಣಿನ ಅಂಗಡಿಗಳ ಮಾಲಕರುಗಳು ಉಪಸ್ಥಿತರಿದ್ದರು.