ಮಡಪ್ಪಾಡಿ : ಸುದ್ದಿ ಸುಳ್ಯ ಹಬ್ಬ – ಗ್ರಾಮ ಸಮಿತಿ ರಚನೆಗೆ ಸಮಾಲೋಚನಾ ಸಭೆ

0

ಸುಳ್ಯ ತಾಲೂಕಿಗೆ 60 ವರ್ಷ ಹಾಗೂ ಸುದ್ದಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಮೂಲಕ ನಡೆಯಲಿರುವ ಸುದ್ದಿ ಸುಳ್ಯ ಹಬ್ಬದ ಪ್ರಯುಕ್ತ ಗ್ರಾಮ ಮಟ್ಟದ ಸಮಿತಿ ರಚನೆಯ ಪೂರ್ವಭಾವಿಯಾಗಿ ಸಮಾಲೋಚನಾ ಸಭೆಯು ಇಂದು ಮಡಪ್ಪಾಡಿ ಗ್ರಾಮದಲ್ಲಿ ನಡೆಯಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಗತಿಪರ ಕೃಷಿಕ, ಊರಿನ ಪ್ರಮುಖರಾದ ಎಂ. ಡಿ. ವಿಜಯಕುಮಾರ್ ಮಾತನಾಡಿ ಸುದ್ದಿ ಸಂಸ್ಥೆಯ ಮಾಲಕರಾದ ಡಾ. ಯು. ಪಿ. ಶಿವಾನಂದರು ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣದ ದುರುಪಯೋಗ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೀಗೆ ಬೇರೆ ಬೇರೆ ಸಮಾಜಮುಖಿ ಹೋರಾಟಗಳನ್ನು ಹಮ್ಮಿಕೊಂಡು ಪತ್ರಿಕೆಯನ್ನು ಮುನ್ನಡೆಸಿದವರು. ಅದರಲ್ಲಿ ಯಶಸನ್ನು ಕಂಡವರು. ಬೇರೆ ಪತ್ರಿಕೆಗಳಿಗಿಂತ ಭಿನ್ನವಾಗಿ ಊರಿನ ಬಡವರು, ಶ್ರೀಮಂತರೆಂಬ ಭೇದ ಭಾವ ಮಾಡದೇ ಎಲ್ಲ ವರದಿಗಳು ಸುದ್ದಿ ಪತ್ರಿಕೆಯಲ್ಲಿ ಬರುವಂತೆ ಮಾಡಿದ್ದಾರೆ. ನಾನು ಕಂಡಂತೆ ಸುದ್ದಿಯ ವರದಿಗಳು ನೈಜವಾಗಿರುತ್ತದೆ. ಸುದ್ದಿಯವರು ಸಂಘಟಿಸುವ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ಮಡಪ್ಪಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಎನ್. ಟಿ. ಹೊನ್ನಪ್ಪ, ಮಡಪ್ಪಾಡಿ ಸೊಸೈಟಿ ನಿರ್ದೇಶಕ ಸೋಮಶೇಖರ ಕೇವಳ, ಅಂಚೆ ವಿತರಕ, ಸುದ್ದಿ ಪ್ರತಿನಿಧಿ ಗೋಪಾಲಕೃಷ್ಣ ಮಾತನಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಜಯರಾಮ್, ಉಪಾಧ್ಯಕ್ಷೆ ಸುಜಾತ ಹಾಡಿಕಲ್ಲು, ಸದಸ್ಯರಾದ ಮಿತ್ರದೇವ ಮಡಪ್ಪಾಡಿ, ಜಯರಾಮ ಹಾಡಿಕಲ್ಲು, ಶರ್ಮಿಳಾ ಕಜೆ, ಮಡಪ್ಪಾಡಿ ಸೊಸೈಟಿ ನಿರ್ದೇಶಕಿ ಪ್ರವೀಣ ಯತೀದ್ರನಾಥ ಪಾಲ್ತಾಡು, ನಿರ್ದೇಶಕ ಕರುಣಾಕರ ಪಾರೆಪ್ಪಾಡಿ,
ಸೊಸೈಟಿ ಸಿಇ ಒ ಪ್ರಶಾಂತ್ ಪೂಂಬಾಡಿ, ಹಿರಿಯರಾದ ನಿತ್ಯಾನಂದ ಬಳ್ಳಡ್ಕ, ದೇವಿದಾಸ್ ಬಾಳಿಕಳ, ಮಡಪ್ಪಾಡಿ ಕೃಷಿ ಸಖಿ ಪುಷ್ಪಲತಾ, ಎನ್ ಆರ್ ಸಿ ಎಂ ಎಂ ಬಿ ಕೆ ಭಾನುಮತಿ ಜೆ. ಪಿ., ಆಶಾ ಕಾರ್ಯಕರ್ತೆ ವೀಣಾ, ಉಮಾವತಿ, ಹಾಗೂ ಮಾಧವ ಶೀರಡ್ಕ, ಕವಿತಾ ಜಿ., ವಸಂತಿ ಕೊಡಪಾಲ, ವಾಣಿ ಮುಳುಗಾಡು, ಮಂಜುಳಾ ಎನ್. ಎ., ಕಮಲ ಜಿ., ಪ್ರೇಮ ಎಸ್. ಆರ್., ಪುನರ್ವಸತಿ ಕಾರ್ಯಕರ್ತ ಪುಟ್ಟಣ್ಣ ವಲಿಕಜೆ., ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ನಾಗವೇಣಿ, ಪುಷ್ಪಲತಾ, ನವ್ಯ ಮತ್ತಿತರರು ಉಪಸ್ಥಿತರಿದ್ದರು.