ಮಾ.2: ಪಂಜ ಸೀಮೆ ಮಾಯಿಲಕೋಟೆ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ

0

ಪಂಜ ಸೀಮೆಯಲ್ಲಿ ಮಾಯಿಲ ಕೋಟೆಯ ಜೀರ್ಣೋದ್ಧಾರ ಕಾರ್ಯಕ್ರಮ ನಡೆಯಲಿದ್ದು . ಜೀರ್ಣೋದ್ಧಾರಕ್ಕೆ ಸುಮಾರು ರೂ. 95 ಲಕ್ಷ ಬೇಕಾಗ ಬಹುದೆಂದು ಅಂದಾಜು ಮಾಡಲಾಗಿದೆ. ಜೀರ್ಣೋದ್ಧಾರ ಕೆಲಸದ ಉದ್ಘಾಟನಾ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಮಾ.2 ಬೆಳಿಗ್ಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯ, ಪಂಜ ಇದರ ಸಭಾಭವನದಲ್ಲಿ ಶ್ರೀ ಕ್ಷೇತ್ರ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ನಡೆಯಲಿದೆ.ಇದೇ ವೇಳೆ ಜೀಣೋದ್ಧಾರ ಸಮಿತಿಯ ಉಪಸಮಿತಿಗಳ ರಚನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.