ಪಂಜ:’ಬೆಂಕಿಯಿಂದ ರಕ್ಷಿಸುವ’ ಕುರಿತು ಬೀದಿ ನಾಟಕ ಪ್ರದರ್ಶನ

0

ಅರಣ್ಯ ಇಲಾಖೆ ಪಂಜ ವಲಯದ ವತಿಯಿಂದ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಕುರಿತು ಬೀದಿ ನಾಟಕ ಪ್ರದರ್ಶನವನ್ನು ಪಂಜದಲ್ಲಿ ಫೆ.28 ರಂದು ನಡೆಸಲಾಯಿತು.
ಮೈಸೂರಿನ ಕಲಾ ತಂಡದ ಸದಸ್ಯರು ನಾಟಕ ಪ್ರದರ್ಶಿಸಿದ್ದು, ಕಾರ್ಯಕ್ರಮದಲ್ಲಿ ಪಂಜ ವಲಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಐವತ್ತೊಕ್ಲು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಆಟೋ ಚಾಲಕರು, ಪಂಜದ ಸಾರ್ವಜನಿಕರು ಹಾಜರಿದ್ದು ಬೀದಿ ನಾಟಕ ವೀಕ್ಷಿಸಿದರು.

ಕಾರ್ಯಕ್ರಮದ ಕುರಿತು ಶಾಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡು ಕಾರ್ಯಕ್ರಮವನ್ನು ಶ್ಲಾಘಿಸಿದರು.