ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ಮೊಗೇರರು, ತನ್ನಿಮಾನಿಗ, ಕ್ಷೇತ್ರಪಾಲಕ ಗುಳಿಗ ಕಾರ್ಣಿಕ ದೈವ, ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವವು ನಿನ್ನೆ ಮತ್ತು ಇಂದು ನಡೆಯಿತು.

ನಿನ್ನೆ ಬೆಳಿಗ್ಗೆ ಗಣಪತಿ ಹವನ, ಸಂಜೆ ಸ್ಥಳ ಶುದ್ಧಿ, ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಮೊಗೇರ ದೈವದ ಭಂಡಾರ ತೆಗೆಯುವುದು, ರಾತ್ರಿ ಅನ್ನ ಸಂತರ್ಪಣೆ ಮೊಗೆರ ದೈವಗಳ ಗರಡಿ ಇಳಿಯುವುದು, ತನ್ನಿ ಮಾಣಿಗ ದೈವ ಗರಡಿ ಇಳಿಯುವುದು, ಪಾತ್ರಿಗಳ ದರ್ಶನ ಸವಾರಿ ನಡೆಯಿತು.
ಇಂದು ಬೆಳಿಗ್ಗೆ ಪ್ರಸಾದ ವಿತರಣೆ, ಅಭಯದ ನುಡಿಯಂತೆ ನುಡಿದು ಭೂತ ಸಂಪಿಗೆಯ ಗಿಡವನ್ನು ಹುಟ್ಟಿಸಿದ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ ದೈವದ ನೇಮ ನಡೆಯಿತು.