ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಪದ್ಮನಾಭ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾ.1ರಂದು ನಾಲ್ಕೂರು ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ಭಾರತಿಯವರ ಸಮ್ಮುಖದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಉತ್ರಂಬೆ ಸೂಚಿಸಿ, ಚಂದ್ರಕಲಾ ಉತ್ರಂಬೆ ಅನುಮೋದಿಸುವ ಮೂಲಕ ನಿರ್ಮಲಾ ಪದ್ಮನಾಭರವರು ಅವಿರೋಧವಾಗಿ ಆಯ್ಕೆಯಾದರು
.
ಸದಸ್ಯರುಗಳಾಗಿ ದೇವಾಲಯದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್, ರಾಜೇಶ್ ಉತ್ರಂಬೆ, ಸೂರ್ಯಪ್ರಕಾಶ್ ಕೋಟೆಬೈಲು, ಮೋನಪ್ಪ ಚಾರ್ಮತ, ವೆಂಕಪ್ಪ ನಾಯ್ಕ ಅಂಜೇರಿ, ಷಣ್ಮುಖ ಅಂಬೆಕಲ್ಲು, ಚಂದ್ರಕಲಾ ಉತ್ರಂಬೆ, ರತ್ನಾವತಿ ಹುಲ್ಲುಕುಮೇರಿ ಆಯ್ಕೆಯಾಗಿದ್ದಾರೆ.



ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ, ಮಾಜಿ ಸದಸ್ಯರಾದ ಧೀರೇನ್ ಪರಮಲೆ ಉಪಸ್ಥಿತರಿದ್ದರು. ಸೂರ್ಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.
ನಿರ್ಮಲಾ ಪದ್ಮನಾಭ ಇವರು ನಡುಗಲ್ಲು ಮಹಿಳಾ ಮಂಡಲದ ಅಧ್ಯಕ್ಷೆಯಾಗಿ, ಗುತ್ತಿಗಾರು ಗ್ರಾ.ಪಂ. ಸದಸ್ಯೆಯಾಗಿ, ಗುತ್ತಿಗಾರು ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಗುತ್ತಿಗಾರು ವಿಎಸ್‌ಎಸ್‌ಎನ್ ಸಹಕಾರಿ ಸಂಘದ ನಿರ್ದೇಶಕಿಯಾಗಿ, ಸುಳ್ಯ ತಾಲೂಕು ಮಹಿಳಾ ವಿವಿದ್ಧೋದ್ದೇಶ ಸಹಕಾರಿ ಸಂಘ ಸುಬ್ರಮ್ಮಣ್ಯ ಇದರ ನಿರ್ದೇಶಕಿಯಾಗಿ, ಸುಳ್ಯ ತಾ.ಮಹಿಳಾ ಒಕ್ಕೂಟದ ಉಪಾಧ್ಯಕ್ಷೆಯಾಗಿ , ಗುತ್ತಿಗಾರು ಲಯನೆಸ್ ಕ್ಲಬ್ ಅಧ್ಯಕ್ಷೆಯಾಗಿ, ಸುಳ್ಯ ತಾ.ಗೌಡ ಮಹಿಳಾ ಗ್ರಾಮ ಸಮಿತಿಯ ಅಧ್ಯಕ್ಷೆಯಾಗಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿ ಉಪಸನಾ ಸಮಿತಿಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಇವರು ದೀರ್ಘಾವಧಿಯೊಂದಿಗೆ ಅಧ್ಯಕ್ಷರಾಗಿ ದೇವಳದಲ್ಲಿ ಸೇವೆ ಸಲ್ಲಿಸಿದ್ದ ದಿ.ಪಿ.ಆರ್.ಪದ್ಮನಾಭ ಇವರ ಧರ್ಮಪತ್ನಿ.