ಬಾಕಿಲ ಗುತ್ತು ಕುಟುಂಬ ಸದಸ್ಯರಾದ ವೆಂಕಪ್ಪ ಸಾಲಿಯಾನ್ ಮತ್ತು ಸಹೋದರರು ನಿರ್ಮಿಸಿದ ಶ್ರೀ ಚಾಮುಂಡಿ ಮತ್ತು ಗುಳಿಗ ದೈವಗಳ ಕಟ್ಟೆಗಳು ನವೀಕರಣಗೊಂಡು ಪ್ರತಿಷ್ಠೆಯು ಮಾರ್ಚ್ 2 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯ ವರಣ , ಸ್ವಸ್ತಿ ಪುಣ್ಯಹ ವಾಚನ, ಸ್ಥಳ ಶುದ್ದಿ, ಪ್ರಸಾದ ಶುದ್ದಿ, ವಾಸ್ತು ಪೂಜೆ, ಮಹಾಗಣಪತಿ ಹೋಮ, ಕಲಶ ಪೂಜೆ ನಡೆದು ಬಳಿಕ 11:50 ನಿಮಿಷಕ್ಕೆ ಶ್ರೀ ಚಾಮುಂಡಿ ಮತ್ತು ಗುಳಿಗ ದೈವದ ಪ್ರತಿಷ್ಠೆ ಸಾನಿಧ್ಯ ಕಲಶಾ ಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು