ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಕ್ಷೇತ್ರಪಾಲ ದೈವಗಳಾದ ಶ್ರೀ ಮಲೆ ಉಳ್ಳಾಕುಲು ಮತ್ತು ಸಪರಿವಾರ ದೈವಗಳ ದೈವಸ್ಥಾನ ದೇಂಗೋಡಿ ಕಿರು ಚಾವಡಿಯು ಅಜೀರ್ಣವಸ್ಥೆಯಲ್ಲಿದ್ದು, ಇದರ ಜೀರ್ಣೋದ್ಧಾರ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಊರ ಮತ್ತು ಪರವೂರ ಭಕ್ತಾಭಿಮಾನಿಗಳನ್ನು ಸೇರಿಸಿಕೊಂಡು ಮಾ. 06 ರಂದು ಪೂರ್ವಾಹ್ನ ಗಂಟೆ 9.00 ರಿಂದ ದೈವಜ್ಞರಾದ ಶ್ರೀಪತಿ ಭಟ್ ಕೆಯ್ಯರು, ಮಾಡಾವು ಇವರಿಂದ ಒಂದು ದಿನದ ಪ್ರಶ್ನೆ ಚಿಂತನೆ ನಡೆಸುವುದೆಂದು ತೀರ್ಮಾನಿಸಲಾಗಿದೆ.
ಆದುದರಿಂದ ಭಕ್ತಾಭಿಮಾನಿಗಳು ಉಪಸ್ಥಿತರಿರಬೇಕೆಂದು ಆಡಳಿತ ಮಂಡಳಿ ತಿಳಿಸಿದೆ.