ಜಯನಗರ ವಾರ್ಡ್ ಸಮಿತಿ ರಚನೆ
ಸುಳ್ಯಕ್ಕೆ 60 ವರ್ಷ -ಸುದ್ದಿಗೆ 40 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆ ಯಿಂದ ಆರಂಭಗೊಂಡಿರುವ ನಮ್ಮ ಗ್ರಾಮ -ನಮ್ಮ ಹೆಮ್ಮೆ ಅಭಿಯಾನದ ಅಂಗವಾಗಿ ಸುಳ್ಯ ಹಬ್ಬ ಸಮಿತಿಗಳನ್ನು ರಚಿಸುವ ನಿಟ್ಟಿನಲ್ಲಿ ಮಾ. 1 ರಂದು ಸಂಜೆ ಜಯನಗರ ವಾರ್ಡ್ ನಲ್ಲಿ ಮೈತ್ರಿ ಮಹಿಳಾ ಮಂಡಲದಲ್ಲಿ ಸಭೆ ನಡೆಸಿ ಜಯನಗರ ವಾರ್ಡ್ ಸಮಿತಿಯನ್ನು ರಚಿಸಲಾಯಿತು.

ಈ ಸಂಧರ್ಭದಲ್ಲಿ ಅಭಿಯಾನದ ಬಗ್ಗೆ ಸುದ್ದಿ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್ ರವರು ಮಾಹಿತಿ ನೀಡಿದರು.
ವಾರ್ಡಿ ನ ಸಂಪೂರ್ಣ ಮಾಹಿತಿ ಸಂಗ್ರಹ, ವೀಡಿಯೋ ದಾಖಲೀಕರಣ, ಬೇಡಿಕೆಗಳ ಪಟ್ಟಿ ತಯಾರಿ ಮಾಡಲಾಗುತಿದ್ದು
ಅದರ ಜತೆಗೆ ವಾರ್ಡ್ ನ ಮೂರು ವಿಭಾಗದಿಂದ ಮೂವರನ್ನು ಆಯ್ಕೆ ಮಾಡಿ ಸುಳ್ಯ ಹಬ್ಬದಲ್ಲಿ ಗುರುತಿಸಿ, ಸನ್ಮಾನಿಸಲಾಗುವುದು.
ಊರಿನ ಏಳಿಗೆಗಾಗಿ ದುಡಿದು ಈಗ ನಿಧನರಾಗಿರುವ ಹಿರಿಯರಲ್ಲೊಬ್ಬರನ್ನು ಮರೆಯಾದ ಸಾಧಕರು ಎಂಬ ನೆಲೆಯಲ್ಲಿ, ಹಾಗೂ ಈಗ ಇರುವವರಲ್ಲಿ ಸರ್ವಾನುಮತದಿಂದ ಒಬ್ಬರನ್ನು ಆಯ್ಕೆ ಮಾಡಿ ವಾರ್ಡ್ ಸನ್ಮಾನ ನೀಡಲು ಮತ್ತು ಊರಿನಿಂದ ಹೋಗಿ ಪರ ಊರಿನಲ್ಲಿದ್ದು ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕಾರ್ಯಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ನಮ್ಮ ಊರು ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಊರಿನ ಮೂಲಭೂತ ಸಮಸ್ಯೆಗಳ ಬಗ್ಗೆ, ಮತ್ತು ಊರಿನ ಸಂಘ ಸಂಸ್ಥೆಗಳ ಬಗ್ಗೆ, ಧಾರ್ಮಿಕ ಕೇಂದ್ರ, ಶಾಲೆ,ಶಿಕ್ಷಣ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮರೆಯಾದ ಸಾಧಕರು ವಿಭಾಗದಲ್ಲಿ ಗುರುತಿಸಲು ವಾರ್ಡಿ ನ ಸಭೆಯಲ್ಲಿ 5 ಮಂದಿಯ ಹೆಸರು ಪ್ರಸ್ತಾಪವಾಯಿತು.
ದಿ। ಈಶ್ವರ ನಾಯಕ್,ದಿ| ರಾಮ ಚಂದ್ರ ಭಟ್ ಅಪರ್ಣ ಇಂಡಸ್ಟ್ರಿಸ್, ದಿ। ರಿಚರ್ಡ್ ಕ್ರಾಸ್ತಾ ರವರ ಹೆಸರುಗಳು ಸಭೆಯಲ್ಲಿ ಸೂಚಿಸಲ್ಪಟ್ಟವು.
ಸರ್ವಾನುಮತದಿಂದ ಆಯ್ಕೆ ಮಾಡುವ ಜವಾಬ್ದಾರಿ ವಾರ್ಡ್ ಸಮಿತಿಯದ್ದೇ ಆಗಿರುತ್ತದೆ ಎಂದು ಸೂಚಿಸಲಾಯಿತು.
ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರುಗಳ ಸರ್ವಾನುಮತದ ಸೂಚನೆಯಂತೆ ನೂತನ ಸಮಿತಿಯನ್ನು ರಚಿಸಿ ಗೌರವ ಅಧ್ಯಕ್ಷರುಗಳಾಗಿ ಶ್ರೀಮತಿ ಶಿಲ್ಪಾಸುದೇವ್, ಬಾಲಕೃಷ್ಣ ಭಟ್ ಕೊಡಕೇರಿ, ದಯಾನಂದ ಕೊಯಿಂಗೋಡಿ, ಅಧ್ಯಕ್ಷರಾಗಿ ರಾಕೇಶ್ ಕುಂಟಿಕಾನ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಮಚಾದೋ, ಸಂಚಾಲಕರಾಗಿ ಪ್ರವೀಣ್ ಕುಮಾರ್ ಎ ಎಂ, ಸಂಯೋಜಕರಾಗಿ ಸುರೇಂದ್ರ ಕಾಮತ್ ಉಪಾಧ್ಯಕ್ಷರುಗಳಾಗಿ ನಾಗರಾಜ ಮೇಸ್ತ್ರಿ, ರಮೇಶ್ ಜಯನಗರ, ಅಬ್ದುಲ್ಲಾ ಹಾಜಿ ಜಯನಗರ,ಮಹಮ್ಮದ್ ಮೊಟ್ಟೆತ್ತೋಡಿ,ಸುರೇಶ್ ಕಾಮತ್, ಉಮೇಶ್ ಆಚಾರಿ,ಬಿ ಎಂ ಅಜೀಜ್,ಮುದ್ದಪ್ಪ ಎನ್ ಸಂಘಟನಾ ಕಾರ್ಯದರ್ಶಿ ಯಾಗಿ ಹನಿಫ್ ಕಾಂಟ್ರಾಕ್ಟರ್ ಜಯನಗರ, ಶ್ರೀಮತಿ ಸುಮತಿ,ಸುಂದರ ಕುತ್ಪಾಜೆ,ಗೌರವ ಸಲಹೆಗಾರ ರಾಗಿ ಕಸ್ತೂರಿ ಶಂಕರ್, ಹರಿ ಪ್ರಸಾದ್, ಮಂಜುನಾಥ್ ಬಳ್ಳಾರಿ,ಕುಸುಮಾಧರ ಕೆ ಜೆ, ರಾಧಾಕೃಷ್ಣ ನಾಯಕ್, ಶಿವನಾಥ್ ರಾವ್ ಹಳೆಗೇಟು, ಗಿರಿಧರ ಕೊಯಿಂಗೋಡಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ಮುಂದಿನ ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಹಾಗೂ ಸದಸ್ಯರುಗಳನ್ನು ಸೇರ್ಪಡೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಸುದ್ದಿ ಪತ್ರಿಕೆ ವರದಿಗಾರ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸುದ್ದಿ ವೆಬ್ಸೈಟ್ ವಿಭಾಗದ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಸಹಕರಿಸಿದರು.ಸಭೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿ ಊರಿನ ಗಣ್ಯರುಗಳು ಭಾಗವಹಿಸಿದ್ದರು.