ಮಾ.15 ,16 : ದೊಡ್ಡಡ್ಕ ಶ್ರೀ ಆದಿಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವ

0

ದ.ಕ ಸಂಪಾಜೆ ಗ್ರಾಮದ ಗೂನಡ್ಕ- ದೊಡ್ಡಡ್ಕ ರಾಜಾರಾಂಪುರದ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ 44 ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ನೇಮೋತ್ಸವವು ಮಾರ್ಚ್ 15 ಮತ್ತು 16 ರಂದು ವಿಜೃಂಭಣೆಯಿಂದ ನಡೆಯಲಿದೆ.

ಮಾರ್ಚ್ 15 ರಂದು ಬೆಳಿಗ್ಗೆ 7 ರಿಂದ ಸ್ಥಳ ಶುದ್ಧೀಕರಣ, ಭಜನಾ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಯಿಂದ ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ 8:30 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ರಾತ್ರಿ 12 ರಿಂದ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿಯುವುದು, ಬಟ್ಟಲು ಕಾಣಿಕೆ, ಹೂವಿನ ಹಾರ ಅರ್ಪಿಸುವುದು ,ಮೊಗೇರ ಪೂಜಾರಿಗಳ ದರ್ಶನ ಸವಾರಿ, ಬಳಿಕ ಹರಕೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ಮಾರ್ಚ್ 16 ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಸ್ವಾಮಿಕೊರಗಜ್ಜ ದೈವದ ನೇಮೋತ್ಸವ ಮತ್ತು ಪ್ರಸಾದ ವಿತರಣೆಯು ನಡೆಯಲಿದೆ. ಊರ ಪರವೂರಿನ ಸಮಸ್ತ ಭಕ್ತಾಧಿಗಳು /ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿ ಕೊರಗಜ್ಜನ ಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರಾರಾಗಬೇಕಾಗಿ ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ.