ಚೆಡಾವು : ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0


ಸಂಪಾಜೆಯ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನಿಧಾನದಲ್ಲಿ ಚೌಕಾರು ಮಂತ್ರವಾದಿ ಗುಳಿಗ, ಕಲ್ಲುರ್ಟಿ ದೈವ ಹಾಗೂ ಧರ್ಮದೈವ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಮಾ.೧ ರಾತ್ರಿ ಸಮಯದಿಂದ ಮಾ. ೨ ಮಧ್ಯಾಹ್ನದವರೆಗೆ ನಡೆಯಿತು.


ಮಾ. ೧ ರಂದು ಬೆಳಿಗ್ಗೆಯಿಂದ ಹಣಪತಿ ಹೋಮ ನಡೆಯಿತು. ಸಂಜೆ ಬಳಿಕ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ವೇಳೆಗೆ ಸಾರ್ವಜನಿಕರಿಗೆ ಅನ್ನಸಂತರ್ಪನೆ ನೀಡಿ ರಾತ್ರಿ ೧೦.೩೦ ರ ವೇಳೆಯಿಂದ ಚೌಕಾರು ಮಂತ್ರವಾದಿ ಗುಳಿಗ, ಕಲ್ಲುರ್ಟಿ ದೈವ ಹಾಗೂ ಧರ್ಮ ದೈವದ ನೇಮ ನಡೆಯಿತು.


ಮಾ. ೨ ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಬಳಿಕ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.
ನೇಮೋತ್ಸವದಲ್ಲಿ ಚೆಡಾವು -ಸಂಪಾಜೆ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯವರು, ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿಯವರು ಹಾಗೂ ಊರ ಪರವೂರ ಭಕ್ತರು ಶ್ರೀ ದೈವದ ಕೃಪೆಗೆ ಪಾತ್ರರಾಗಿ ಪ್ರಸಾದ ಸ್ವೀಕರಿಸಿದರು .