ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಂತ್ರವಾದಿ ಗುಳಿಗ, ಮೊಗೇರ್ಕಳ ದೈವಗಳು, ತನ್ನಿಮಾನಿಗ ಹಾಗೂ ಕೊರಗ ತನಿಯ ನೇಮೋತ್ಸವ ಮಾ. 15 ಮತ್ತು 16 ರಂದು ನಡೆಯಲಿದೆ.
ಮಾ. ೦೮ ರಂದು ಮುಹೂರ್ತದ ಗೊನೆ ಕಡಿಯುವುದು ನಡೆದು ಮಾ. 15 ರಂದು ಬೆಳಿಗ್ಗೆ ಗಣಹೋಮ ನಡೆಯಲಿದೆ. ಸಂಜೆ 4 ಗಂಟೆಯಿಂದ ಕುಣಿತ ಭಜನೆ, 5 ಗಂಟೆಯಿಂದ ಮಂತ್ರವಾದಿ ಗುಳಿಗ ದೈವದ ನೇಮ ನಡೆಯಲಿದೆ.
ರಾತ್ರಿ ಮೊಗೇರ್ಕಳ ದೈವಗಳ ಭಂಡಾರ ತೆಗೆದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಮೊಗೇರ್ಕಳ ದೈವಗಳ ನೇಮ, ನಂತರ ತನ್ನಿಮಾನಿಗ ನೇಮ ನಡೆಯಲಿದೆ.
ಮಾ. 16 ರಂದು ಬೆಳಿಗ್ಗೆ 5 ಗಂಟೆಯಿಂದ ಕೊರಗ ತನಿಯ ದೈವದ ನೇಮ ನಡೆಯಲಿದೆ.