ಗುತ್ತಿಗಾರು : ಮೂರನೇ ವರ್ಷದ ದೇವಶ್ಯ ಗೌಡ ಕಪ್-2025 ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ

0

 ದಂಬೆಕೋಡಿ ಪ್ರಥಮ, ಪರ್ಲಕೋಟಿ ದ್ವಿತೀಯ, ತಳೂರು ತೃತೀಯ, ಕುದುಪಜೆ ಚತುರ್ಥ

ಮೂರನೇ ವರ್ಷದ ದೇವಶ್ಯ ಗೌಡ ಕಪ್ ಓವರ್ ಅರ್ಮ್ ಕ್ರಿಕೆಟ್ ಪಂದ್ಯಾಟ ಗುತ್ತಿಗಾರಿನ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾ. 1 ಮತ್ತು 2  ರಂದು ನಡೆಯಿತು.

ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ದಂಬೆಕೋಡಿ, ದ್ವಿತೀಯ ಸ್ಥಾನವನ್ನು ಪರ್ಲಕೋಟಿ, ತೃತೀಯ ಸ್ಥಾನವನ್ನು ತಳೂರು, ಚತುರ್ಥ ಸ್ಥಾನವನ್ನು ಕುದುಪಜೆ ತಂಡದವರು ಪಡೆದುಕೊಂಡರು.

ಪಂದ್ಯಾಟದಲ್ಲಿ ಶಿಸ್ತುಬದ್ದ ತಂಡ ಪ್ರಶಸ್ತಿಯನ್ನು ಚಿಕ್ಮುಳಿ ತಂಡವರು ಪಡೆದುಕೊಂಡರು. ಪಂದ್ಯಾಟದಲ್ಲಿ ಸರ್ವಾಂಗೀಣ ಆಟಗಾರನಾಗಿ ಕಾರ್ತಿಕ್ ದಂಬೆಕೋಡಿ, ಉತ್ತಮ ದಾಂಡಿಗ ರಕ್ಷಿತ್ ಪರ್ಲಕೋಟಿ, ಉತ್ತಮ ಎಸೆತಗಾರ ಕೀರ್ತನ್ ದಂಬೆಕೋಡಿ, ಉತ್ತಮ ಗೂಟರಕ್ಷಕ ಸಜನ್ ಪರ್ಲಕೋಟಿ, ಫೈನಲ್ ಪಂದ್ಯಶ್ರೇಷ್ಠ ಜಗತ್ ದಂಬೆಕೋಡಿ, ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಹಾರ್ದಿಕ್ ಬಂಗಾರಕೋಡಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕರು,ದೇವಿಸಿಟಿ ಕಾಂಪ್ಲೆಕ್ಸ್ ಮಾಲಕ ದೊಡ್ಡಣ್ಣ ಗೌಡ ಚಿಕ್ಮುಳಿ  ಹಾಗೂ ರಾಷ್ಟ್ರೀಯ ಯೋಗಪಟು ಮಣಿಪ್ರಕಾಶ್ ಕಡೋಡಿ ಇವರನ್ನು ಸನ್ಮಾನಿಸಲಾಯಿತು.

ಪಂದ್ಯಾಟದಲ್ಲಿ ಸಿಕ್ಸರ್ ಬೌಂಡರಿ ವಿಕೆಟ್ ಹೋದಾಗ ಚೆಂಡೆಯ ಡೋಲು ಸದ್ದು ಹಾಗೂ ಸಿಡಿಮದ್ದು ಪ್ರದರ್ಶನ ಎಲ್ಲರ ಗಮನಸೆಳೆಯಿತು.

ಪಂದ್ಯಾಟದಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲೆಯ ೩೨ ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು.