ನೂತನ ಅಧ್ಯಕ್ಷರಾಗಿ ಹಾಜಿ ಬಿ.ಎಂ. ಮಹಮ್ಮದ್
ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ, ಕೋಶಾಧಿಕಾರಿಯಾಗಿ ಎನ್.ಎ.ಅಬ್ದುಲ್ಲಾ ಆಯ್ಕೆ
ಹಯಾತುಲ್ ಇಸ್ಲಾಂ ಕಮಿಟಿ ಬುಸ್ತಾನುಲ್ ಉಲೂಂ ಮದರಸ ಇದರ ವಾರ್ಷಿಕ ಮಹಾಸಭೆ ಫೆ.23 ರಂದು ಅಧ್ಯಕ್ಷರಾದ ಬಶೀರ್ ಬಿ.ಎ ಅಧ್ಯಕ್ಷತೆಯಲ್ಲಿ ಜಟ್ಟಿಪಳ್ಳ ಮದರಸ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನು ಮದರಸ ಸದರ್ ಅಧ್ಯಾಪಕರಾದ ಲತೀಫ್ ಸಖಾಫಿ ದುವಾಶಿರ್ವಚನ ಮಾಡಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಾಸಭೆ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಪೈಸಲ್ ಜಟ್ಟಿಪಳ್ಳ ವಾಚಿಸಿದರು.
ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಗೌರವಧ್ಯಕ್ಷರಾಗಿ ಅಬೂಭಕ್ಕರ್ ಕೆ.ಎ.ರವರು ಪುನರಾಯ್ಕೆಯಾದರು.
ಅಧ್ಯಕ್ಷರಾಗಿ ಹಾಜಿ ಮಹಮ್ಮದ್ ಬಿ.ಎ.ಉಪಾಧ್ಯಕ್ಷರಾಗಿ ಜಾಜಿ ಅಬೂಭಕ್ಕರ್ ವಿಕೆ,ಬಶೀರ್ ಕ್ವಾಲಿಟಿ, ಪ್ರಧಾನ ಕಾರ್ಯದರ್ಶಿ ಯಾಗಿ ಶರೀಫ್ ಸುದ್ದಿ, ಕಾರ್ಯದರ್ಶಿ ಯಾಗಿ ಅಸೀರ್,ಕಬೀರ್ ಜಟ್ಟಿಪಳ್ಳ, ಕೋಶಾಧಿಕಾರಿ ಯಾಗಿ ಎನ್.ಎ.ಅಬ್ದುಲ್ಲಾ, ಮದರಸ ಉಸ್ತುವಾರಿ ಯಾಗಿ ರಶೀದ್ ಜಟ್ಟಿಪಳ್ಳ ಕಾರ್ಯಾಕಾರಿ ಸಮಿತಿ ನಿರ್ದೇಶಕರಾಗಿ ತಾಜುದ್ದೀನ್ ಎಂ.ಎಸ್.,ಬಶೀರ್ ಬಾಳಮಕ್ಕಿ,ಶಿಹಾಬ್ ಷಾ., ರಜಾಕ್.ಕೆ.ಎಂ.,ಇಮ್ರಾನ್ ಕೊಡಿಯಾಲಬೈಲು ರವರನ್ನು ಆಯ್ಕೆ ಮಾಡಲಾಯಿತು.