ಅರಂಬೂರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಉಪ ಸಮಿತಿ ಸಂಚಾಲಕರ ಪೂರ್ವ ಸಿದ್ಧತಾ ಸಭೆ

0

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.15 ರಿಂದ 18 ರ ತನಕ ನಡೆಯಲಿರುವ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿಯಾಗಿ ಉಪ ಸಮಿತಿಗಳ ಸಂಚಾಲಕರ ಸಭೆಯು ಇಂದು ದೈವಸ್ಥಾನದ ವಠಾರದಲ್ಲಿ‌ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹೋತ್ಸವದ ಸಂದರ್ಭದಲ್ಲಿ ಗ್ರಾಮದ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸುವ ಕುರಿತು ದಿನ ಮತ್ತು ಸಮಯ ನಿಗದಿ ಪಡಿಸಲಾಯಿತು. ಉಪ ಸಮಿತಿ ಸಂಚಾಲಕರ ಜವಬ್ದಾರಿ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಪ್ರತ್ಯೇಕ ಸ್ವಯಂ ಸೇವಕರ ತಂಡವನ್ನು ರಚಿಸಿ ಜವಬ್ದಾರಿ ಹಂಚಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಪತಿ ಭಟ್ ಮಜಿಗುಂಡಿ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಪವಿತ್ರನ್ ಗುಂಡ್ಯ, ರಾಧಾಕೃಷ್ಣ ಪರಿವಾರಕಾನ, ಜತ್ತಪ್ಪ ರೈ ಅರಂಬೂರು, ಕುಂಞಕಣ್ಣ ಅರಂಬೂರು,ನಾರಾಯಣ ಬಾರ್ಪಣೆ, ರದೀಶನ್ ಅರಂಬೂರು,ನಾರಾಯಣ ಕೇಕಡ್ಕ,ಧನಂಜಯ ಕುಂಚಡ್ಕ, ಗೋಕುಲ್ ದಾಸ್, ಕುಂಞಕಣ್ಣನ್ ಶ್ರೀಶೈಲಂ, ಭಾಸ್ಕರ ನಾಯರ್, ಗಂಗಾಧರ ಎನ್.ಎ, ಚಂದ್ರಶೇಖರ ನೆಡ್ಚಿಲು, ರತ್ನಾಕರ ರೈ ಅರಂಬೂರು, ಅಭಿನಂದನ್ ನಾಯರ್, ಅನಿಲ್ ಕುಮಾರ್ ಪರಿವಾರಕಾನ,ಸುದೇಶ್ ಅರಂಬೂರು, ಜಯಪ್ರಕಾಶ್ ಅರಂಬೂರು,ನಾರಾಯಣ ನಾಯ್ಕ್ ಅರಂಬೂರು, ಹಾಗೂ ಮಹಿಳಾ ಮಂಡಲ, ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ಪ್ರಾದೇಶಿಕ ಸಮಿತಿ ಸದಸ್ಯರು,ತೀಯ ಸಮಾಜದ ಸದಸ್ಯರು, ಉಪ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.