ಕಳಂಜ ಗ್ರಾ.ಪಂ ಗೆ ಎರಡು ಭಾರಿ ಗಾಂಧಿ ಪುರಸ್ಕಾರ ಲಭಿಸಿದರೂ ಪ್ರಶಸ್ತಿಯ ಮೊತ್ತ ರೂ.5 ಲಕ್ಷ ಬಂದಿರಲಿಲ್ಲ.
ಇದೀಗ ಮಾ.12 ರಂದು 2023- 24 ರ ಸಾಲಿನ ಗಾಂಧಿ ಪುರಸ್ಕಾರದ ಸಹಾಯಧನ ಮೊತ್ತ ₹ 5 ಲಕ್ಷ ಗ್ರಾ.ಪಂ ಅಕೌಂಟ್ ಗೆ ಬಂದಿರುವುದಾಗಿ ತಿಳಿದು ಬಂದಿದೆ.
ಆದರೆ ಪ್ರಶಸ್ತಿ ಪತ್ರ ಇನ್ನಷ್ಟೇ ಲಭಿಸಬೇಕಾಗಿದೆ.
ಕಳಂಜ ಗ್ರಾಮ ಪಂಚಾಯತ್ 2019- 20
ನೇ ಸಾಲಿನ ಗಾಂಧಿ ಪುರಸ್ಕಾರಕ್ಕೂ ಆಯ್ಕೆಗೊಂಡಿದ್ದರೂ ಅದರ ಮೊತ್ತ ದೊರೆತಿರಲಿಲ್ಲ. ಆಗಿನ ಸರ್ಕಾರ ಪ್ರಶಸ್ತಿ ಪತ್ರ ಮಾತ್ರ ನೀಡಿತ್ತು. ಆದರೆ ಪ್ರಶಸ್ತಿ ಪಡೆದ ಲೆಕ್ಕದಲ್ಲಿ ನೀಡ ಬೇಕಾಗಿದ್ದ ಸಹಾಯಧನ ಮೊತ್ತ ₹ 5 ಲಕ್ಷ ನೀಡಲಿಲ್ಲ. ಪ್ರಶಸ್ತಿ ಘೋಷಣೆ ಆಗಿ 5 ವರ್ಷ ಕಳೆದಿದೆ, ಇನ್ನು ಸಹಾಯ ಧನ ಮೊತ್ತ ಸಿಗುವುದು ಕಷ್ಟ ಸಾಧ್ಯ ಎನ್ನಲಾಗಿದೆ.
ಪ್ರಶಸ್ತಿ ಮೊತ್ತ ಬಾರದಿರುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆ ವತಿಯಿಂದ ವರದಿ ಮಾಡಲಾಗಿತ್ತು. ಇದೀಗ ಒಂದು ಭಾರಿಯ ಸಹಾಯಧನ ಬಂದಿರುವುದಾಗಿ ತಿಳಿದುಬಂದಿದ್ದು, ಇದರಿಂದಾಗಿ ಪಂಚಾಯತ್ ಗೂ ಸಮಾಧಾನವಾದಂತಾಗಿದೆ ಮತ್ತು ಪ್ರಶಸ್ತಿಗೂ ಮೌಲ್ಯ ದೊರೆದಂತಾಗಿದೆ.