ಮುಪ್ಪೇರ್ಯ ಗ್ರಾಮದ ಪೆರ್ಮುಂಡ ಹೊನ್ನಡ್ಕ ಎಂಬಲ್ಲಿ ಮಾ. ೧೫ರಂದು ವಿದ್ಯುತ್ ತಂತಿ ತುಂಡಾಗಿ ಬಿದ್ದ ಸಂಭವಿಸಬಹುದಾದ ಅನಾಹುತ ಲೈನ್‌ಮ್ಯಾನ್‌ಗಳ ಕ್ಷಿಪ್ರ ಕಾರ್ಯಾಚರಣೆಯಿಂದ ತಪ್ಪಿದಂತಾಗಿದೆ.
ಮಾ. ೧೫ ರಂದು ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಆ ದಾರಿಯಾಗಿ ಬರುತ್ತಿದ್ದ ಪವರ್‌ಮ್ಯಾನ್ ವಿಜಿತ್ ರವರು ಲೈನ್ ತುಂಡಾಗಿ ಬಿದ್ದಿರುವುದನ್ನು ಗಮನಿಸಿ, ಆ ಭಾಗದ ಪವರ್ ಮೆನ್ ಲಿಂಗರಿಗೆ ಮಾಹಿತಿ ನೀಡಿ ಲೈನ್ ಆಪ್ ಮಾಡಿಸಿ ಉರಿಯುತ್ತಿದ್ದ ಬೆಂಕಿಯನ್ನು ಸ್ಥಳೀಯರ ಸಹಕಾರದಿಂದ ನಂದಿಸಿ, ಬಳಿಕ ತಂತಿಯನ್ನು ಜೋಡಿಸಿಕೊಟ್ಟರೆನ್ನಲಾಗಿದೆ.