ಮಾ. 18, 19 : ಮಾವಿನಕಟ್ಟೆ ಮಹಾವಿಷ್ಣು ದೈವದ ಒತ್ತೆಕೋಲ

0

ಜೋಡು ದೀಟಿಗೆ ನಾಟಕ ಪ್ರದರ್ಶನ

ಇತಿಹಾಸ ಪ್ರಸಿದ್ದ ಉದಯಗಿರಿ – ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವದ ಒತ್ತೆಕೋಲ ಮಹೋತ್ಸವವು ಮಾ. 18 ಮತ್ತು 19ರಂದು ನಡೆಯಲಿದೆ.

ಮಾ. 18ರಂದು ಬೆಳಿಗ್ಗೆ ಗಣಪತಿ ಹವನ, ಶುದ್ಧಿ ಕಲಶ, ಮೇಲೆರಿ ಕಾರ್ಯಕ್ರಮ, ಅಶ್ವತ್ತ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 6.30ರಿಂದ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 12.30ಕ್ಕೆ ಕುಳಿಚಾಟ, ಮಾ. 19ರಂದು ಬೆಳಿಗ್ಗೆ 5ರಿಂದ ಕಳಸಾಟಕ್ಕೆ ಹೋಗುವುದು, ದೈವ ಮೇಲೇರಿಗೆ ಪ್ರವೇಶ, ಹರಿಕೆ ಪ್ರಸಾದ ನಂತರ ಮಾರಿಕಳ ಪ್ರವೇಶ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ : ಮಾ. 18ರಂದು ರಾತ್ರಿ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಉರ್ವ ಚಿಲಿಂಬಿ, ಮಂಗಳೂರು ಇವರಿಂದ ಪಣೋಲಿ ಬೈಲ್ ದ ಅಪ್ಪೆ ಕಲ್ಲುರ್ಟಿ, ಕಲ್ಕುಡ ಡೈವೋಲು ಉಂಡಾಯಿನ ಕಥೆ ಅದ್ದೂರಿ ತುಳು ಜನಪದ ಶೈಲಿದ ನಾಟಕ ಜೋಡು ಜೀಟಿಗೆ ನಾಟಕ ಪ್ರದರ್ಶನ ನಡೆಯಲಿದೆ.