ಸ್ಥಳಕ್ಕೆ ಬಂದ ಅಧಿಕಾರಿಗಳಿಂದ ಸಮಾಲೋಚನೆ : ಸಮಸ್ಯೆ ಸರಿಪಡಿಸಲು ವಾರದ ಗಡುವು

ಸುಳ್ಯದ ಕುರುಂಜಿಗುಡ್ಡೆ ರಸ್ತೆ ಚರಂಡಿಗೆ ಪಕ್ಕದಲ್ಲಿರುವ ಎರಡು ಸರಕಾರಿ ಹಾಸ್ಟೆಲ್ ಗಳ ತ್ಯಾಜ್ಯ ನೀರು ಹರಿದು ದುರ್ವಾಸನೆ ಬೀರಿ, ಸಾರ್ವಜನಿಕರು ನಡೆದಾಡಲು ಆಗುತ್ತಿರುವ ತೊಂದರೆಯ ಕುರಿತು ಅಧಿಕಾರಿಗಳಿಗೆ ದೂರಿಕೊಂಡ ಹಾಗೂ ಸ್ಥಳಕ್ಕೆ ಬಂದ ನ.ಪಂ. ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ಹಾಸ್ಟೆಲ್ ನವರಿಗೆ ವಾರದ ಗಡುವು ನೀಡಿರುವ ಘಟನೆ ವರದಿಯಾಗಿದೆ.

ಸುಳ್ಯದ ಕೋರ್ಟ್ ಹಿಂಬದಿಯಲ್ಲಿರುವ ಬಿ.ಸಿ.ಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಕೊಳಚೆ ನೀರುಗಳು ರಸ್ತೆ ಚರಂಡಿಗೆ ಹರಿಯುತ್ತಿದೆ. ಇದು ದುರ್ವಾಸನೆಯಿಂದ ಕೂಡಿದ್ದು ಆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಸಂಜೆಯಾದರೆ ಸೊಳ್ಳೆಗಳು ಈ ಚರಂಡಿಯಿಂದ ಮೇಲೆಳುತ್ತದೆ. ಈ ಸಮಸ್ಯೆಯ ಕುರಿತು ದಯಾನಂದ ಕೇರ್ಪಳ ಹಾಗೂ ಶಿವಪ್ರಸಾದ್ ಕೇರ್ಪಳರು ಮಾ.18ರಂದು ನ.ಪಂ. ಹಾಗೂ ಎರಡು ಹಾಸ್ಟೆಲ್ ಗಳ ಅಧಿಕಾರಿಗಳಿಗೆ ದೂರಿಕೊಂಡರು.
ಸಂಜೆ ವೇಳೆಗೆ ನಗರ ಪಂಚಾಯತ್ ಆರೋಗ್ಯ ನಿರೀಕ್ಷಕ ರಾಮಚಂದ್ರರು ಹಾಗೂ ಎರಡು ಹಾಸ್ಟೆಲ್ ಗಳ ವಾರ್ಡ್ ನ್ ಗಳಿದ್ದು, ಸಮಸ್ಯೆ ಹೇಳಿಕೊಂಡವರನ್ನು ನ.ಪಂ. ಅಧಿಕಾರಿಗಳು ಸ್ಥಳಕ್ಕೆ ಕರೆದುಕೊಂಡರು.
ಚರಂಡಿಯಲ್ಲಿ ಹರಿಯುವ ನೀರು ದುರ್ವಾಸನೆ ಬೀರುವದನ್ನು ಅರಿತ ನ.ಪಂ. ಆರೋಗ್ಯ ನಿರೀಕ್ಷಕರಾದ ರಾಮಚಂದ್ರರು “ಈ ರೀತಿ ಕೊಳಚೆ ನೀರು ಚರಂಡಿಗೆ ಬಿಡುವುದು ಸರಿಯಲ್ಲ. ಇದನ್ನು ತಡೆಯಲು ಹಾಸ್ಟೆಲ್ ವತಿಯಿಂದ ಕ್ರಮಕೈಗೊಳ್ಳಬೇಕೆಂದು ಹೇಳಿದರು.
ಹಾಸ್ಟೆಲ್ ನವರು ನೀರು ಹೋಗಲು ಜಾಗ ಇಲ್ಲದಿರುವ ಕುರಿತು ಹಾಗೂ ಈ ನೀರು ಹೋಗಲು ಇರುವ ಗುಂಡಿ ತುಂಬಿ ಹೊರ ಹರಿಯ ಕುರಿತು ಹೇಳಿದರು. ಈ ಕುರಿತು ಕೆಲ ಸಮಯ ಸಮಾಲೋಚನೆ ನಡೆದು ಮುಂದಿನ ಮಂಗಳವಾರದ ಒಳಗೆ ಚರಂಡಿಗೆ ನೀರು ಹರಿಯುವುದನ್ನು ತಡೆಯುವ ಕುರಿತು ಸ್ಥಳೀಯರಿಗೆ ಭರವಸೆ ನೀಡಿದರು.
ಮುಂದಿನ ಮಂಗಳವಾರ ಮತ್ತೆ ಸ್ಥಳ ಪರಿಶೀಲನೆ ನಡೆಸುವುದಾಗಿ ಆರೋಗ್ಯ ನಿರೀಕ್ಷಕರು ಹೇಳಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಚಂದ್ರಶೇಖರ ರಾವ್ ಕೇರ್ಪಳ, ಚಂದ್ರಶೇಖರ ಕೇರ್ಪಳ, ಮೋಹನ್ ಕೇರ್ಪಳ, ರೋಹಿತ್ ಕಟ್ಟಕೋಡಿ ಇದ್ದರು. ನ.ಪಂ. ಸಿಬ್ಬಂದಿ ಸುದೇವ್ ಇದ್ದರು.