
ಪೆರುವಾಜೆ ಗ್ರಾಮ ಪಂಚಾಯತ್ ನ ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ , ಬೆಳ್ಳಾರೆ ಇಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಎನ್. ಆರ್.ಎಲ್.ಎಂ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಂಜೀವಿನಿ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವು ಮಾ.20 ರಂದು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸಬಿತ ಸಹಾಯಕ ಪ್ರಾಧ್ಯಾಪಕರು,ಸಮಾಜ ಶಾಸ್ತ್ರ ವಿಭಾಗ ವಿಶ್ವವಿದ್ಯಾಲಯ ಮಂಗಳೂರು ಇವರು ಮಾಸಿಕ ಸಂತೆ ಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು. ಬಾಲಸುಬ್ರಮಣ್ಯ ಪಿ.ಎಸ್ ಪ್ರಾಂಶುಪಾಲರು ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ ಬೆಳ್ಳಾರೆ ಇವರು ಸಭಾಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ. ಸಬಿತಾ ಸಹಾಯಕ ಪ್ರಾಧ್ಯಾಪಕರು ಸಮಾಜ ಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾಲಯ ಇವರು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ವೇತ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್ .ಆರ್. ಎಲ್ ಎಂ ತಾಲೂಕು ಪಂಚಾಯತ್ ಸುಳ್ಯ
ಪೆರುವಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಉಷಾ ಬಿ.ಭಟ್ , ಪೆರುವಾಜೆ,.
ಗೋವಿಂದ ರಾಜು ಕೆ. ಓ (ಸಂಚಾಲಕರು ಐ.ಕ್ಯೂ.ಎ.ಸಿ)ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ ,ಬೆಳ್ಳಾರೆ ಶ್ರೀಮತಿ ಅರ್ಚನಾ ಸಹಾಯಕ ಪ್ರಾಧ್ಯಾಪಕರು ಸಂಯೋಜಕರು ಮಹಿಳಾ ವೇದಿಕೆ )ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ ,ಬೆಳ್ಳಾರೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಬಿಕೆ, ಎಲ್.ಸಿ.ಆರ್.ಪಿ,ಸಖಿ ಗಳು,ಪದಾಧಿಕಾರಿಗಳು,ಸದಸ್ಯರು, ಲಯನ್ಸ್ ಪದಾಧಿಕಾರಿಗಳು,ಪೋಷಕರು,
ವಿಧ್ಯಾರ್ಥಿ,ವಿದ್ಯಾರ್ಥಿನಿಯರು,ಭೋಧಕ ಬೋಧಕೇತರ ವೃಂದದವರು,ಸಿಬ್ಬಂದಿಗಳು ಹಾಜರಿದ್ದರು. ಸಭೆಯಲ್ಲಿ ಲಿಂಗತ್ವ. ,ಲಿಂಗ ಸಮಾನತೆ,ಮಹಿಳೆಯರ ಹಕ್ಕುಗಳು, ಮಹಿಳೆಯರಿಗೆ ಸ್ಥಾನಮಾನ ದ ಬಗ್ಗೆ ಚರ್ಚಿಸಲಾಯಿತು. NRLM ವತಿಯಿಂದ ಲಿಂಗತ್ವ ಅಭಿಯಾನ , FNHW, ಸಂಜೀವಿನಿ ಮಹಿಳೆಯರಿಗೆ ಸರ್ಕಾರ ಮೂಲಕ ದೊರಕುವ ಸವಲತ್ತು ಮತ್ತು ಅವಕಾಶ ಗಳ ಬಗ್ಗೆ
ಸ್ವ ಸಹಾಯ ಸಂಘ ಗಳ ಉತ್ಪನ್ನ ಗಳ ಪರಿಚಯ ,vdvk ಮಾರ್ಟ್ ವಿಶೇಷತೆ ಬಗ್ಗೆ ,ಕೊರಗ ಸಮುದಾಯ ಕಾಡು ಉತ್ಪನ್ನ ಗಳ ಮೂಲಕ ಆದಾಯ ಸಿಗುತ್ತಿದೆ ಎಂಬುದನ್ನು ಸವಿವರವಾಗಿ ಮಾಹಿತಿ ನೀಡಲಾಯಿತು. ಡಾ.ಸಬಿತ ಕೊರಗ ಸಮುದಾಯ ದಲ್ಲಿ ರಾಜ್ಯದಲ್ಲಿ ಪ್ರಥಮ ಮಹಿಳೆಯಾಗಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಇವರು ಸಂಜೀವಿನಿ ಕಾರ್ಯಚಟುವಟಿಕೆ, ಸಂಜೀವಿನಿ ಉತ್ಪನ್ನ ಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.