
ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದ್ರಸದಲ್ಲಿ ರಂಜಾನ್ ಮಾಸದ ಅಂಗವಾಗಿ ನಡೆಯುತ್ತಿರುವ ಇಫ್ತಾರ್ ಕೂಟದ ಮಾರ್ಚ್ 21ರಂದು ಜಯನಗರ ಯಂಗ್ ಮೆನ್ಸ್ ಯುವಕರ ತಂಡದ ವತಿಯಿಂದ ಗ್ರಾಂಡ್ ಇಫ್ತಾರ್ ಕೂಟವನ್ನು ಏರ್ಪಡಿಸಲಾಯಿತು.
ದಾನಿಗಳ ಸಹಕಾರದಿಂದ ಈ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದ್ದು ಸ್ಥಳೀಯ ಯುವಕರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಗೊಂಡಿತು.
ನೂರಕ್ಕೂ ಹೆಚ್ಚು ಮುಸಲ್ಮಾನ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಯುವಕರಾದ ನವಾಜ್ ಪಂಡಿತ್,ಸಿನಾನ್ ಜಯನಗರ,ಸಿರಾಜ್,ಶಬ್ಬೀ ರ್ ಕಮ್ಮಾಡಿ ಶಫೀಕ್,ತೌಫೀಕ್,ಜಝೀಲ್ಉಬೈದ್,ಸಿದ್ದೀಕ್ ಇಂದ್ರಾಜೆ, ಮಿಸ್ಬಾಹ್, ಜಾಸ್ಸಿಂ,ಎಂ ತೌಫಿಕ್, ಅಶ್ರಫ್,ಹಾಫಿ, ನೌಫಾಲ್,ಉನೈಸ್, ಇರ್ಷಾದ್,ರಾಫಿ, ಸಫಲ್ ಹಾಗೂ ಇನ್ನೂ ಹಲವಾರು ಯುವಕರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.
ಸ್ಥಳೀಯ ಮದರಸ ಸದರ್ ಮೊಅಲ್ಲಿಂ ಶಫೀಕ್ ಹಿಮಮಿ ದುವಾ ನೆರವೇರಿಸಿದರು.