
ಶ್ರೀನಾಗಬ್ರಹ್ಮ ಕೋಟಿ ಚೆನ್ನಯ ಆದಿಬೈದೆರುಗಳ ವಾರ್ಷಿಕ ಜಾತ್ರೋತ್ಸವ ಎ ೧೧ ರಂದು ನಡೆಯಲಿದ್ದು ಆ ಪ್ರಯುಕ್ತ ಮಾರ್ಚಿ ೨೩ ರಂದು ಗರಡಿಯ ಅನುವಂಶಿಕ ಆಡಳಿತ ದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರ ಮಾರ್ಗದರ್ಶನದಂತೆ ಶ್ರಮದಾನದ ಮೂಲಕ ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗರಡಿಯ ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಗರಡಿ ಮಾಹಿತಿದಾರ ಎನ್ ಜಿ ಲೋಕನಾಥ ರೈ, ಕೆ ಎನ್ ರಘುನಾಥ ರೈ, ಸುಧೀರ್ ಕುಮಾರ್ ಶೆಟ್ಟಿ ಕೆ, ನಾಗೇಶ್ ಕೆ. ಆಳ್ವ , ಗಿರಿ ಪ್ರಸಾದ್ ರೈ, ಅನಿಲ್ ಆಳ್ವ, ಜಗನಾಥ ರೈ , ಸುಜಿತ್ ರೈ ಕೆ, ಎಣ್ಮೂರ ಧ. ಗ್ರಾ. ಯೋಜನೆ ಒಕ್ಕೂಟ ಸೇವಾ ಪ್ರತಿನಿಧಿಗಳಾದ ಲೀಲಾವತಿ ಅಲೆಕ್ಕಾಡಿ, ಪ್ರಮೀಳಾ, ಒಡಿಯೂರು ಘಟ ಸಮಿತಿ ಅಧ್ಯಕ್ಷ ಪ್ರಕಾಶ್ ರೈ ಕುಳಾಯಿತೋಡಿ ಒಡಿಯೂರು ಎಣ್ಮೂರು ಸೇವಾಧ್ಯಕ್ಷೆ ಜಾನಕಿ ಅನೋವು , ನಿಂತಿಕಲ್ಲು ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಗಣೇಶ್ ರೈ ಪೋಗೋಲಿ ಮತ್ತು ಸದಸ್ಯರು, ನಿಡ್ವಾಲ ವಿಷ್ಣು ಸೇವಾ ಶಕ್ತಿ ಅಧ್ಯಕ್ಷ ಲತೀಶ್ ಅಲೆoಗಾರ ಮತ್ತು ಸದಸ್ಯರು, ಎಣ್ಮೂರು ಧರ್ಮಸ್ಥಳ ಸಂಘ, ಒಡೆಯೂರು ಸಂಘದ ಸದಸ್ಯರುಗಳಲ್ಲದೆ ಸ್ಥಳೀಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮದಾನ ಭಗವಹಿಸಿ ಹೊರಾಂಗಣ, ಒಳಾಂಗಣ, ಗಡಿಯ ವಠಾರ, ಗಿಡಗಟ್ಟೆಗಳನ್ನು ತೆರವುಗೊಳಿಸಿ, ಸುಣ್ಣ ಬಣ್ಣ ಕೊಟ್ಟು ಸ್ವಚ್ಛತೆ ಮಾಡಿದರು. (ASS)
