ನಾಗಶ್ರೀ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ರಾಜ್ಯಮಟ್ಟದ ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ ಮತ್ತು ಸುಳ್ಯ ,ಕಡಬ ತಾಲೂಕುಗಳ ಮಹಿಳೆಯರ ತ್ರೋಬಾಲ್ ಪಂದ್ಯಾಟ ಚೆನ್ನಕೇಶವ ದೇವಸ್ಥಾನ ಬಳಿಯಿರುವ ಪ್ರಭು ಮೈದಾನದಲ್ಲಿ ಮಾ.23 ರಂದು ನಡೆಯಿತು.

ಕ್ರೀಡಾ ಕಾರ್ಯಕ್ರಮವನ್ನು ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾದರ್ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಮೇನಾಲದ ಸ್ವಾಮೀಜಿ ಶ್ರೀ ಪದ್ಮನಾಭ ಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕತೆಯನ್ನು ನಾಗಶ್ರೀ ಫ್ರೆಂಡ್ಸ್ ಅಧ್ಯಕ್ಷೆ ಶ್ರೀಮತಿ ತಿಲಕ ನವೀನ ವಹಿಸಿದ್ದರು.

ಮಾಜಿ ಶಾಸಕ ಎಸ್. ಅಂಗಾರ,ನ.ಪಂ ಸದಸ್ಯ ಎಂ ವೆಂಕಪ್ಪಗೌಡ,ನ.ಪಂ ಸದಸ್ಯೆ ಕಿಶೋರಿ ಶೆಟ್ ಉಪಸ್ಥಿತರಿದ್ದರು.
ಜೂನಿಯರ್ ದೈಹಿಕ ಶಿಕ್ಷಕ ನಟರಾಜ್,ಕಲಾವಿದ ಶಶಿಅಡ್ಕಾರ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಸ್ಥೆಯ ಸದಸ್ಯೆ ಕವಿನ ಪರಂಗಾಜೆ ಸ್ವಾಗತಿಸಿ,ರಮ್ಯ ಉಳುವಾರು ಪ್ರಸ್ತಾವಿಕ ಮಾತನಾಡಿದರು.
ಪ್ರಸಾದ್ ಕಾಟೂರ್ ಕಾರ್ಯಕ್ರಮ ನಿರೂಪಿಸಿದರು