ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಖರ್ಚು ವೆಚ್ಚಗಳ ಬಗ್ಗೆ ಸಾರ್ವಜನಿಕ ಸಭೆ ಮಾ.23 ರಂದು ಪಾರ್ವತಿ ಸಭಾಭವನದಲ್ಲಿ ನಡೆಯಿತು .
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ , ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ , ಧರ್ಮಣ್ಣ ನಾಯ್ಕ ಗರಡಿ ,ಧರ್ಮಪಾಲ ಗೌಡ ಗೌಡ ಕಾಚಿಲ ಮರಕ್ಕಡ ,ಮಾಯಿಲಪ್ಪ ಗೌಡ ಎಣ್ಮೂರು ಪಟ್ಟೆ ಎಣ್ಮೂರು, ರಾಮಚಂದ್ರ ಭಟ್, ,ಶ್ರೀಮತಿ ಪವಿತ್ರ ಮಲ್ಲೆಟ್ಟಿ , ಶ್ರೀಮತಿ ಮಾಲಿನಿ ಕುದ್ವ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ ,ಪರಮೇಶ್ವರ ಬಿಳಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.




ಸಭೆಯಲ್ಲಿ ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಜಾತ್ರೋತ್ಸವದ ವಿವಿಧ ಸಮಿತಿಗಳ ಸಂಚಾಲಕರು-ಸದಸ್ಯರು, ಸೀಮೆಯ ಭಕ್ತಾದಿಗಳು , ದೇವಳದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್
ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಧರ್ಮಣ್ಣ ನಾಯ್ಕ ಗರಡಿ ವಂದಿಸಿದರು.