Home ಪ್ರಚಲಿತ ಸುದ್ದಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸುಬ್ರಹ್ಮಣ್ಯ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸುಬ್ರಹ್ಮಣ್ಯ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ

0

ಸರಿಪಡಿಸಲು ಒತ್ತಾಯ: ಶಿವರಾಮ ರೈ

ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಎರಡು ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು ಆದರೆ ಈ ಬಾರಿ ಒಂದು ಸ್ಥಾನ ನೀಡುವ ಮುಖಾಂತರ ಸುಬ್ರಹ್ಮಣ್ಯದ ಕಾಂಗ್ರೆಸ್ ಕಾರ್ಯಕರ್ತರನ್ನು ಅವಮಾನಿಸಲಾಗಿದೆ. ಎಂದು ಕಡಲ ತಾಲೂಕು ಕೆಡಿಪಿ ಸದಸ್ಯ ಕಾಂಗ್ರೆಸ್ ನ ಶಿವರಾಮ ರೈ ತಿಳಿಸಿದ್ದಾರೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಕೋರ್ ಕಮಿಟಿ ಸದಸ್ಯರಿಗೆ ಮನವಿ ಮಾಡಿ ನಾಲ್ಕು ಸ್ಥಾನಗಳನ್ನು ಸುಬ್ರಹ್ಮಣ್ಯ ಗ್ರಾಮದವರಿಗೆ ನೀಡಲು ಕೇಳಿಕೊಳ್ಳಲಾಗಿತ್ತು. ಈ ಸಂದರ್ಭ ನೀಡುವ ಭರವಸೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೀಡಿದ್ದರು. ಆದರೆ ಇದೀಗ ಕೇವಲ ಸುಬ್ರಹ್ಮಣ್ಯ ಗ್ರಾಮಕ್ಕೆ ಒಂದು ಸ್ಥಾನವನ್ನು ನೀಡಲಾಗಿದೆ. ಈ ಹಿಂದೆ ಸುಬ್ರಹ್ಮಣ್ಯ ಅಭಿವೃದ್ದಿ ಪ್ರಾಧಿಕಾರ ಮಾಡಲು ಆಸೆ ಹೊಂದಿದ ವ್ಯಕ್ತಿಗಳು ಸರಕಾರದ ಮಟ್ಟದಲ್ಲಿ ಬಹಳಷ್ಟು ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸಿದ್ದರು. ಆದರೆ ಇದರ ಭಾದಕಗಳನ್ನು ತಾಲೂಕುಮತ್ತು ಜಿಲ್ಲಾ ಮಟ್ಟದ ನಾಯರಿಗೆ ತಿಳಿಸಿ ನಂತರ ರಮಾನಾಥ ರೈ ಸೂಚನೆ ಮೇರೆಗೆ ಶ್ರೀಮತಿ ಶಕುಂತಳಾ ಶೆಟ್ಟಿ ಮಾಜಿ ಶಾಸಕರು ಹಾಗು ನಿತ್ಯಾನಂದ ಮುಂಡೋಡಿಯವರ ನಾಯಕತ್ವದಲ್ಲಿ ಮುಜರಾಯಿ ಸಚಿವರು ಮತ್ತು ಸ್ಪಿಕರ್ ರವರ ಉಪಸ್ಥಿತಿಯಲ್ಲಿ ಸಭೆ ನಡೆದು ಅದನ್ನು ಮಾಡದಿರಲು ತಿರ್ಮಾನಿಸಲಾಗಿತ್ತು. ಈ ಪ್ರಯತ್ನದಲ್ಲಿ ಈಗ ಶಿಪಾರಸ್ಸುಗೊಂಡ ಹರೀಶ್ ಇಂಜಾಡಿ ಹೊರತು ಪಡಿಸಿ ಬೇರೆ ಯಾರು ಬಂದಿರಲಿಲ್ಲ. ಇದೀಗ ಈ ವ್ಯವಸ್ಥೆಯನ್ನು ನೋಡುವಾಗ ಕಾಗೆ ಕಟ್ಟಿದ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟು ಮರಿ ಮಾಡಿಸಿ ಬೆಳೆಸುವ ನೆನಪು ಆಗುತಿದೆ. ಸ್ಥಳೀಯವಾಗಿ ಸುಬ್ರಹಣ್ಯ ರಾವ್, ಶ್ರೀಮತಿ ಸೌಮ್ಯ ಹಾಗು ಇತರ ಕೆಲವರಿಗೆ ಸಮಿತಿ ಸದಸ್ಯತನ ನೀಡುವುದಾಗಿ ಉನ್ನತ ಮಟ್ಟದ ನಾಯಕರು ನೇಮಕಗೊಳಿಸುವ ಭರವಸೆ ನೀಡಿದ್ದರು. ಆದರೆ ಸ್ಥಳೀಯರಿಗೆ ಆದ್ಯತೆ ನೀಡದೆ ದೇವಸ್ಥಾನದ ಪರ ಹೆಚ್ಚು ಹೋರಾಟಗಳಲ್ಲಿ ಭಾಗವಹಿಸದೇ ಇರುವವವರಿಗೆ ನೀಡಿರುವುದು ಬಹಳ ಬೇಸರ ತಂದಿರುತ್ತದೆ ಈಗಾಗಲೇ ಶಿಫಾರಸು ಮಾಡಿರುವ ಪಟ್ಟಿಯಲ್ಲಿ ಜಾತಿವಾರು ತಾರತಮ್ಯ ಮಾಡಲಾಗಿದೆ ಕಡಬ ತಾಲೂಕಿನಲ್ಲಿ ದೇವಸ್ಥಾನವಿದ್ದರೂ ಕಡಬ ತಾಲೂಕಿಗೆ ಕೇವಲ ಮೂರು ಸ್ಥಾನಗಳನ್ನ ನೀಡಲಾಗಿದೆ. ಕಳೆದ ಬಾರಿ ದೇವಸ್ಥಾನ ಸುಳ್ಯ ತಾಲೂಕಿನಲ್ಲಿದ್ದು ಏಳು ಸ್ಥಾನಗಳನ್ನು ಸುಳ್ಯ ತಾಲೂಕಿಗೆ ಒಂದು ಸ್ಥಾನ ಕಡಬಕ್ಕೆ ನೀಡಲಾಗಿತ್ತು ಆದರೆ ಈ ಬಾರಿ ಕೇವಲ ಮೂರು ಸ್ಥಾನವನ್ನು ಕಡಬ ತಾಲೂಕಿಗೆ ಮೀಸಲು ಇಟ್ಟಿರುವುದು ನೋಡುವಾಗ ಕಡಬ ತಾಲೂಕಿನ ಪ್ರಮುಖ ನಾಯಕರ ಸಲಹೆ ಮತ್ತು ಮಾಹಿತಿಯನ್ನು ತಿರಸ್ಕರಿಸಿರುವುದು ಕಂಡು ಬಂದಿರುತ್ತದೆ ಇದರಿಂದ ಸುಬ್ರಹ್ಮಣ್ಯ ಕಾಂಗ್ರೆಸ್ ಹಲವು ನಾಯಕರು ಮುಂದಿನ ಚುನಾವಣೆಯಲ್ಲಿ ಮತ್ತು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಕ್ರಿಯರಾಗದಿರಲು ನಿರ್ಧಾರವನ್ನು ತೆಗೆದುಕೊಂಡಿರುವುದು ಕಂಡು ಬಂದಿದೆ ಮತ್ತು ಎರಡು ಜನ ರಾಜೀನಾಮೆಯನ್ನು ಕಳುಹಿಸಿರುವುದು ತಿಳಿದು ಬಂದಿದೆ ಆದುದರಿಂದ ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಮತ್ತು ಸುಬ್ರಹ್ಮಣ್ಯ ಗ್ರಾಮಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ ಪಟ್ಟಿಯನ್ನು ಪುನರ್ ಪರಿಶೀಲನೆ ನಡೆಸಿ ಸ್ಥಳೀಯ ಮಲೆಕುಡಿಯ ಜನಾಂಗ ಮತ್ತು ಸಾಮಾನ್ಯ ವರ್ಗ ಮತ್ತು ಕೂಜುಗೋಡು ಕಟ್ಟೆಮನೆ ಮನೆತನಕ್ಕೆ ಒಂದು ಸ್ಥಾನ ಹಾಗು ಬಂಟ ಸಮುದಾಯಕ್ಕೆ ಸುಳ್ಯ ತಾಲೂಕಿಗೆ ಎರಡು ಸ್ಥಾನ ನೀಡಿ ಕಡಬ ತಾಲೂಕಿಗೆ ಒಂದೇ ಒಂದು ಸ್ಥಾನ ನೀಡದೆ ಇರುವುದನ್ನು ಪರಿಶೀಲಿಸಿ ಒಂದು ಸ್ಥಾನವನ್ನು ಕಡಬ ತಾಲೂಕಿಗೆ ನೀಡಲು ಈ ಮೂಲಕ ಬತ್ತಾಯ ಮಾಡುತ್ತೇವೆ ತಪ್ಪಿದಲ್ಲಿ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

NO COMMENTS

error: Content is protected !!
Breaking