ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯಕ್ಕೆ ಹಾಗೂ ಕೂಜುಗೋಡು ಮನೆತನಕ್ಕೆ ಅವಕಾಶ ಕಲ್ಪಿಸಲು ಸಚಿವರಿಗೆ ಮನವಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯ ಸಮುದಾಯದವರಿಗೆ ಹಾಗೂ ಕೂಜುಗೋಡು ಮನೆತನದವರಿಗೆ ಅವಕಾಶ ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ಮುಜುರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದ್ದು ಮಾದವ ದೇವರಗದ್ದೆ ಹಾಗೂ ಸತೀಶ್ ಕೂಜುಗೋಡು ಮತ್ತಿತರರು ಸೇರಿ ಮನವಿ ನೀಡಿರುವುದಾಗಿ ತಿಳಿದು ಬಂದಿದೆ. ಈ ವಿಚಾರ ಬೆಂಬಲಿಸಿ ದ.ಕ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಭರತ್ ಮುಂಡೋಡಿ ಪತ್ರ ನೀಡಿರುವುದಾಗಿ ತಿಳಿದು ಬಂದಿದೆ.