ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಕಲ್ಮಡ್ಕ ಗ್ರಾಮ ಪಂಚಾಯತ್, ಸಪ್ತಶ್ರೀ ಗೊಂಚಲು ಸಮಿತಿ ಕಲ್ಮಡ್ಕ, ಲಯನ್ಸ್ ಕ್ಲಬ್ ಪಂಜ, ಪ್ರಕೃತಿ ಯುವತಿ ಮಂಡಲ ಪಡ್ಪಿನಂಗಡಿ, ಪತಂಜಲಿ ಮಹಿಳಾ ಯೋಗ ಸಮಿತಿ ಸುಳ್ಯ, ಶ್ರೀ ದುರ್ಗಾ ಸಂಜೀವಿನಿ ಒಕ್ಕೂಟ ಕಲ್ಮಡ್ಕ ಇದರ ಸಂಯುಕ್ತ ಆಶ್ರಯದಲ್ಲಿವಿಶ್ವ ಮಹಿಳಾ ದಿನಾಚರಣೆ ಮಾ.24 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಲ್ಮಡ್ಕ ಸಪ್ತಶ್ರೀ ಗೊಂಚಲು ಸಮಿತಿ ಅಧ್ಯಕ್ಷೆ ಶ್ರೀಮತಿ ಭವಾನಿ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.ಸುಳ್ಯ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಶ್ರೀಮತಿ ಶ್ವೇತಾ ಮಹಿಳೆಯರಿಗೆ ಸ್ವ ಉದ್ಯೋಗ ಮತ್ತು ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.

ಸುಳ್ಯ ತಾಲೂಕು ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಬಿ ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಕಲ್ಮಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಯಂ. ಸಾಧನೆಗೈದ ಮಹಿಳೆಯರ ಕುರಿತು ಮಾತನಾಡಿದರು. ದಕ್ಷಿಣ ಕರ್ನಾಟಕ .ಪತಂಜಲಿ ಪ್ರಭಾರಿ ಯೋಗ ಸಮಿತಿ ಶ್ರೀಮತಿ ಕಲಾವತಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಮತ್ತು ಒತ್ತಡಗಳನ್ನು ದೂರ ಮಾಡಲು ಯೋಗಭ್ಯಾಸದ ಪ್ರಾಮುಖ್ಯತೆಯನ್ನು ತಿಳಿಸಿದರು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಶಶಿಧರ ಪಳಂಗಾಯ ಶುಭ ಹಾರೈಸಿದರು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ನೀಡಿದ ಮಹಿಳೆಯರಿಗೆ ಬಹುಮಾನ ನೀಡಿದರ ಹಾಗೂ ಪಡಿತರ ಚೀಟಿ ಇಲ್ಲದ ಕುಟುಂಬಕ್ಕೆ ಅಕ್ಕಿ ನೀಡಿದರು .ಇದರ ಪ್ರಾಯೋಜಕತ್ವವನ್ನು ಸುರೇಶ್ ಕುಮಾರ್ ನಡ್ಕ ರವರು ವಹಿಸಿಕೊಂಡಿದ್ದರು. ಪಡ್ಪಿನಂಗಡಿ ಪ್ರಕೃತಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶೇಷಮ್ಮ ಪಿ, ದಕ್ಷಿಣ ಕರ್ನಾಟಕ ಪತಂಜಲಿ ಯೋಗ ಸದಸ್ಯೆ ಶ್ರೀಮತಿ ಸರಸ್ವತಿ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಾ ನಡ್ಕ ಸ್ವಾಗತಿಸಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಾರದ ಶ್ರೀಮತಿ ರವಿಶ್ರೀ ಪ್ರಾಸ್ತಾವಿಕ ಮಾತಾಡಿದರು. ಕಾರ್ಯಕ್ರಮದಲ್ಲಿ ಸೀಮಂತ ಮತ್ತು ಅನ್ನ ಪ್ರಾಷಣ ಕಾರ್ಯಕ್ರಮ ನಡೆಯಿತು.ಕೋಟೆಗುಡ್ಡೆ,ಪಂಬೆತಾಡಿ, ಕಲ್ಮಡ್ಕ,ಪಡ್ಪಿನಂಗಡಿ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಗೆ ಬರುವ ನಾಲ್ಕು ಸಾಧಕ ಮಹಿಳೆಯರನ್ನು ಹಾಗೂ ಶಾಸಕಿ ಕು.ಭಾಗೀರಥಿ ಮುರಳ್ಯ ರವರನ್ನು ಗೌರವಿಸಲಾಯಿತು. ಶ್ರೀಮತಿ ಧನ್ಯ ಆಕ್ರಿಕಟ್ಟೆ ನಿರೂಪಿಸಿದರು.ಶ್ರೀಮತಿಮಮತಾ ಕಾಪಡ್ಕ ವಂದಿಸಿದರು. ಬಳಿಕ ಪತಂಜಲಿ ಯೋಗ ಸಮಿತಿ ಸದಸ್ಯರಿಂದ ಯೋಗ ಕಾರ್ಯಕ್ರಮ,ಗಮಕವಾಚನ,ಸ್ತ್ರಿ ಶಕ್ತಿ ಗುಂಪುಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರೋಗ್ಯ ಸಹಾಯಕಿಯಾರಿಂದ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು.