ತಾಲೂಕು ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ

0

ಅಧ್ಯಕ್ಷರಾಗಿ ಉದಯ ಜಟ್ಟಿಪಳ್ಳ, ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾ ಮೊರಂಗಲ್ಲು

ಸುಳ್ಯ ತಾಲೂಕು ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಾ.25 ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಗುರುರಾಜ್ ಅಜ್ಜಾವರ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಮುಖಂಡರುಗಳಾದ ಮಾಜಿ ಅಧ್ಯಕ್ಷ ದಿನೇಶ್ ಬಂಗೇರ, ಹಾಲಿ ಪ್ರಧಾನ ಕಾರ್ಯದರ್ಶಿ ವಸಂತ ಬೆಳ್ಳೂರು, ಸವಿತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಬೆಳ್ಳೂರು ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ನಂತರ ಗುರುರಾಜ್ ಅಜ್ಜಾವರ, ಜಯಪ್ರಕಾಶ್ ಮಂಡೆಕೋಲು ಮತ್ತಿತರರು ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉದಯ ಜಟ್ಟಿಪಳ್ಳ, ಕಾರ್ಯದರ್ಶಿ ನವೀನ್ ಸೂಂತೋಡು, ಖಜಾಂಚಿ ಪ್ರಸನ್ನ ಪಂಜ ಅವರುಗಳ ತಂಡಕ್ಕೆ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಉದಯ ಜಟ್ಟಿಪಳ್ಳರವರು ಸಮಾಜದ ಸಂಘಟನೆಗಾಗಿ ಪ್ರತೀ ಮನೆಭೇಟಿ ಕಾರ್ಯಕ್ರಮ ನಡೆಸಿದ್ದೇವೆ. ಮುಂದೆ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ ಎಂದರು. ವೇದಿಕೆಯಲ್ಲಿದ್ದ ಪ್ರಮುಖರೆಲ್ಲರು ಶುಭಹಾರೈಸಿ ಮಾತನಾಡಿದರು.


ಸುಳ್ಯ ತಾಲೂಕು ಸವಿತಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಇಂದಿರಾ ಪದ್ಮನಾಭ, ಕಡಬ ತಾಲೂಕು ಸವಿತಾ ಸಮಾಜದ ಅಧ್ಯಕ್ಷರು ಹಾಗೂ ಸುಳ್ಯ ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷರಾಗಿದ್ದ ವಸಂತ ಮೂರಾಜೆ, ಸುಳ್ಯ ತಾಲೂಕು ಬಾರ್ಬರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪದ್ಮನಾಭ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ತಾಲೂಕು ಸವಿತಾ ಸಮಾಜದ ೨೦೨೫ – ೨೦೨೮ ನೇ ಸಾಲಿನ ನೂತನ ಪದಾಧಿಕಾರಿ ಪದಗ್ರಹಣದಲ್ಲಿ ಅಧ್ಯಕ್ಷರಾಗಿ ಉದಯ ಜಟ್ಟಿಪಳ್ಳ, ಉಪಾಧ್ಯಕ್ಷೆಯಾಗಿ ಶ್ರೀಮತಿ ಪುಷ್ಪಾ ಮೊರಂಗಲ್ಲು, ಕಾರ್ಯದರ್ಶಿಗಳಾಗಿ, ನವೀನ್ ಸೂಂತೋಡು, ಜತೆ ಕಾರ್ಯದರ್ಶಿಯಾಗಿ ಸುಮನಾ ಸಂಜಯ್ ಅರಂತೋಡು, ಖಜಾಂಚಿಯಾಗಿ ಪ್ರಸನ್ನ ಪಂಜ, ಉಪ ಖಜಾಂಚಿಯಾಗಿ ಕವನ ಕೆ.ಬಿ. ಕೇರ್ಪಳ, ಗೌರವಾಧ್ಯಕ್ಷರಾಗಿ ಗುರುರಾಜ್ ಅಜ್ಜಾವರ, ಗೌರವ ಸಲಹೆಗಾರರಾಗಿ ಗಿಹರೀಶ್ ಬಂಟ್ವಾಳ್ ಮತ್ತು ದಿನೇಶ್ ಸರಸ್ವತಿ ಮಹಲ್, ನಿರ್ದೇಶಕರುಗಳಾಗಿ ದೇವದಾಸ್ ಹರಿಹರ ಪಲ್ಲತಡ್ಕ, ಲಕ್ಷ್ಮೀಶ ಮಂಡೆಕೋಲು, ನೀರೇಂದ್ರ ದುಗಲಡ್ಕ, ಪುರುಷೋತ್ತಮ ಅಜ್ಜಾವರ, ಚಂದ್ರೇಶ ಹಳೆಗೇಟು, ಇಂದಿರಾ ಪದ್ಮನಾಭ, ಭಾರತಿ ಐವರ್ನಾಡು, ಪೂರ್ಣಿಮಾ ಜಟ್ಟಿಪಳ್ಳ, ರಾಘವೇಂದ್ರ ಬೆಳ್ಳಾರೆ, ಕನಕಲಿಂಗಂ ( ಪ್ರಕಾಶ ) ಕನಕಮಜಲು, ಪದ್ಮನಾಭ ಎಸ್. ಜಟ್ಟಿಪಳ್ಳ ಆಯ್ಕೆಯಾದರು.