ಗೌರವಾಧ್ಯಕ್ಷರಾಗಿ ಸಂಕಪ್ಪ ಗೌಡ ನೀರ್ಪಾಡಿ,ಅಧ್ಯಕ್ಷರಾಗಿ ಮಹಾಲಿಂಗನ್ ಬಾಜರ್ ತ್ತೊಟ್ಟಿ,ಕಾರ್ಯದರ್ಶಿಯಾಗಿ ಲವಕುಮಾರ್ ಕನ್ನಡ್ಕ ಆಯ್ಕೆ
ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆಯು ಟ್ರಸ್ಟ್ ನ ಅಧ್ಯಕ್ಷ ರಘುನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಾ.24 ರಂದು ದೈವಸ್ಥಾನದಲ್ಲಿ ನಡೆಯಿತು.
ದಿನೇಶ್ ಕುಮಾರ್ ಕೆ.ಸಿಯವರು ವರದಿ ಮಂಡಿಸಿದರು.
ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಸಂಕಪ್ಪ ಗೌಡ ನೀರ್ಪಾಡಿಯವರು ಪುನರಾಯ್ಕೆಯಾದರು.
ಅಧ್ಯಕ್ಷರಾಗಿ ಮಹಾಲಿಂಗನ್ ಬಾಜರ್ ತ್ತೊಟ್ಟಿ,ಉಪಾಧ್ಯಕ್ಷರಾಗಿ ನೋಣಪ್ಪ ಗೌಡ ಕಲ್ಕುದಿ, ಕಾರ್ಯದರ್ಶಿಯಾಗಿ ಲವಕುಮಾರ್ ಕನ್ನಡ್ಕ, ಕೋಶಾಧಿಕಾರಿಯಾಗಿ ದಿನೇಶ್ ಕೆ.ಸಿ,ಜತೆ ಕಾರ್ಯದರ್ಶಿಯಾಗಿ ಜಯಪ್ರಕಾಶ್ ನೆಕ್ರಾಜೆ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಕೃಷ್ಣಪ್ಪ ಗೌಡ ಪಾರೆಪ್ಪಾಡಿ,ತಾರಾಪ್ರಸಾದ್ ಜಾಕೆ,ದೇವಿಪ್ರಸಾದ್,ರಘುನಾಥ ಶೆಟ್ಟಿ,ಮುರಳಿ ಮಾವಂಜಿ,ಗಣೇಶ್ ಕುಕ್ಕುದಡಿ,ರಾಜೀವ ಪೂಜಾರಿ,ಅಭಿನಂದನ್ ನಾಯರ್,ದಯಾನಂದ ಹೊದ್ದೆಟ್ಟಿ,ರಾಮಚಂದ್ರ ಭಟ್,ಕವನ್ ಮಯ್ಯ, ಚಂದ್ರಶೇಖರ ನಾಯಕ್ ಆಯ್ಕೆಯಾದರು.


