ಬಾಳಿಲದಿಂದ ಕಾಣೆಯಾಗಿದ್ದ ಹರೀಶ್ ರೈಯವರು ಧರ್ಮಸ್ಥಳದಲ್ಲಿ ಪತ್ತೆ

0

ಮದುವೆ ನಿಗದಿಯಾಗಿದ್ದ ಬಾಳಿಲದ ಯುವಕನೋರ್ವ ಕಾಣೆಯಾಗಿದ್ದು
ಇಂದು ಧರ್ಮಸ್ಥಳದಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬಾಳಿಲದ ದೇರಂಪಾಲು ಶೀನಪ್ಪ ರೈ ಎಂಬವರ ಪುತ್ರ ಹರೀಶ್ ರೈ ಎಂಬವರು ಮಾ.20 ರಿಂದ ಕಾಣೆಯಾಗಿದ್ದು ಈ ಬಗ್ಗೆ ಅಣ್ಣ ವೆಂಕಪ್ಪ ರೈ ದೇರಂಪಾಲುರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು.
ಹರೀಶ್‌ ರೈ ಯವರು ಸುಮಾರು 13 ವರ್ಷಗಳಿಂದ ಮಹೀಂದ್ರಾ ಫೈನಾನ್ಸ್‌ ಪುತ್ತೂರು ಇಲ್ಲಿ ಸೀನಿಯರ್‌ ಎಕ್ಸಿಕ್ಯೂಟಿವ್‌ ಆಗಿ ಕೆಲಸ ಮಾಡಿಕೊಂಡಿದ್ದು,
ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತೆನ್ನಲಾಗಿದೆ