ಮಲೆನಾಡು ಗಿಡ್ಡ ಗೋ ತಳಿಯನ್ನು ವೀಕ್ಷಿಸಿದ ಮಾಜಿ ಸಚಿವ ಎಸ್. ಅಂಗಾರ

0

ಮಾಜಿ ಅಲೆಕ್ಕಾಡಿಯ ಆಕ್ಷಯ ಆಳ್ವರವರ ಮನೆಗೆ ಭೇಟಿ ನೀಡಿ ಮಲೆನಾಡು ಗಿಡ್ಡ ಗೋ ಸಂತತಿಯನ್ನು ವೀಕ್ಷಿಸಿದರು. ಮಲೆನಾಡುಗಿಡ್ಡ ಹಸುಗಳ ಸಂರಕ್ಷಣೆ, ಸಂವರ್ಧನೆ ಕಾರ್ಯವನ್ನು ಶ್ಲಾಘಿಸಿ, ತಾವೂ ಮಲೆನಾಡು ಗಿಡ್ಡ ಹಸುಗಳನ್ನು ಸಾಕುವ  ಇಚ್ಛೆಯನ್ನು ವ್ಯಕ್ತಪಡಿಸಿದರು.

ಎಸ್. ಅಂಗಾರರಿಗೂ ಒಂದು ಮಲೆನಾಡು ಗಿಡ್ಡ ಹೆಣ್ಣು ಕರು ಹಾಗೂ ಒಂದು ಗಂಡು ಕರುವನ್ನು ಅಭಿಯಾನದ ವತಿಯಿಂದ ನೀಡಲಾಗುವುದೆಂದು ಸಂರಕ್ಷಣಾ ಸಮಿತಿಯ ಅಕ್ಷಯ ಆಳ್ವರು‌ ಸುದ್ದಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನತಾ ಬಜಾರ್ ಮಾಜಿ‌ ಅಧ್ಯಕ್ಷ ಪ್ರಸನ್ನ ಭಟ್, ಅಕ್ಷಯ ಆಳ್ವರ ಕುಟುಂಬಸ್ಥರು ಉಪಸ್ಥಿತರಿದ್ದರು.