ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಶೇಷ ಆರೈಕೆ ವಿಭಾಗದ ಆಡಳಿತಾಧಿಕಾರಿ ಪ್ರಮೋದ್ ಕೆ.ಜೆ. ಯವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಿಂದ “ಆರ್ಡಿನಲ್ ಯುಟಿಲಿಟಿ ಆಫ್ ಹೆಲ್ತ್ ಕೇರ್ ಇನ್ಫರ್ಮೇಷನ್ ಟೆಕ್ನಾಲಜಿ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಅಧ್ಯಯನ” ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಡಾಕ್ಟರೇಟ್ (Ph.D.) ಪದವಿ ನೀಡಲಾಗಿದೆ. ಇವರು ಡಾ. ಎಚ್. ರಾಜೇಶ್ವರಿ, ಅಸೋಸಿಯೇಟ್ ಪ್ರೊಫೆಸರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಮಾ. 27 ರಂದು ನಡೆದ ವಿಶ್ವವಿದ್ಯಾನಿಲಯದ 20ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದವಿ ಸ್ವೀಕರಿಸಿದರು.
ಎಂ.ಎಸ್ಸಿ (ನರ್ಸಿಂಗ್) ಹಾಗೂ ಎಂ.ಬಿ.ಎ (ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್) ಪದವಿಗಳನ್ನು ಹೊಂದಿರುವ ಇವರು ಆರೋಗ್ಯ ಸೇವಾ ನಿರ್ವಹಣಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈ ಕ್ಷೇತ್ರದಲ್ಲಿ ಮೂರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಪ್ರಸ್ತುತ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ವಿಶೇಷ ಆರೈಕೆ ವಿಭಾಗದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಮೂಲತಃ ನೆಲ್ಯಾಡಿಯವರು ಆಗಿದ್ದು, ಜೋಸೆಫ್ ಕೆ.ವಿ. ಹಾಗೂ ಶ್ರಿಮತಿ ಎಲ್ಸಮ್ಮಾ ಜೋಸೆಫ್ ಅವರ ಪುತ್ರರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಜಿಮ್ಸಿ ಜಾನ್ ಕೆವಿಜಿ ನರ್ಸಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


