ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ, ಸುಳ್ಯ ಮತ್ತು ಉಪ್ಪಿನಂಗಡಿ ಯ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಒಟ್ಟು 18 ವಿದ್ಯಾರ್ಥಿಗಳು ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಅಮರಪಡ್ನೂರು ಗ್ರಾಮದ ಮಂಗಲ್ಪಾಡಿ ಮನೋಹರ ಎಂ ಮತ್ತು ಲಲಿತಾ ದಂಪತಿಗಳ ಪುತ್ರಿ ಕುಕ್ಕುಜಡ್ಕ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ವಿಮರ್ಶಾ ಎಂ, ಕುದ್ಮಾರು ಗ್ರಾಮದ ಕೆರೆನಾರು ವಿಜಯ್ ಬಿ ಮತ್ತು ವನಜಾ ಕೆ ದಂಪತಿಗಳ ಪುತ್ರಿ ಕುದ್ಮಾರು ಸ.ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅದಿತಿ ಕೆ, ಪಾಲ್ತಾಡಿ ಗ್ರಾಮದ ಕೆಮ್ಮಾರ ರಾಜೇಶ ಪಿ ಸಿ ಮತ್ತು ಅಸ್ಮಿತಾ ಪಿ. ಎಂ ದಂಪತಿಗಳ ಪುತ್ರ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ಹಿತಾರ್ಥ್ ಪಿ., ಸುಬ್ರಹ್ಮಣ್ಯ ಗ್ರಾಮದ ಮಲ್ಲಿಗೆಮಜಲು ವೇಣುಗೋಪಾಲ ಎಂ ಮತ್ತು ಹರ್ಷಿತಾ ಬಿ ದಂಪತಿಗಳ ಪುತ್ರ ಬಳ್ಪ ಸ. ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿಹಾನ್, ಚಾರ್ವಕ ಗ್ರಾಮದ ಕೋಲ್ಪೆ ಕುಸುಮಾಧರ ಮತ್ತು ಹೇಮಲತಾ ಕೆ ದಂಪತಿಗಳ ಪುತ್ರ ಚಾರ್ವಕ ಸ. ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಲವೀಶ್, ಚಾರ್ವಕ ಗ್ರಾಮದ ಗುಂಡಿಮಜಲು ಪರಮೇಶ್ವರ್ ಜಿ ಮತ್ತು ವನಿತಾ ಜಿ ಆರ್ ದಂಪತಿಗಳ ಪುತ್ರಿ ನರಿಮೊಗರು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಿ ಗೌಡ, ಬಳ್ಪ ಗ್ರಾಮದ ಕುಳ ಉಮೇಶ್ ಮತ್ತು ಹೇಮಲಾಕ್ಷಿ ದಂಪತಿಗಳ ಪುತ್ರಿ ಬಳ್ಪ ಸ. ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪೂರ್ವಿಕಾ ಕೆ, ಐವರ್ನಾಡು ಗ್ರಾಮದ ಉದ್ದಂಪಾಡಿ ಆನಂದ ಯು ಮತ್ತು ಮಾಲತಿ ದಂಪತಿಗಳ ಪುತ್ರಿ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೋಶನಿ ಎ ಯು, ಮುರುಳ್ಯ ಗ್ರಾಮದ ಮಾನ್ಯಡ್ಕ ಮೇಡಪ್ಪ ಗೌಡ ಮತ್ತು ಸರೀತಾ ಕುಮಾರಿ ಎಸ್ ದಂಪತಿಗಳ ಪುತ್ರಿ ಮಾನ್ಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಾನಿಧ್ಯ ಎಂ ಎಸ್, ಏನೆಕಲ್ಲು ತುಂಬತ್ತಾಜೆ ದೇವಿಪ್ರಸಾದ್ ಟಿ ಮತ್ತು ಗೀತಾ ಎಂ ದಂಪತಿಗಳ ಪುತ್ರಿ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿ ತನ್ವಿಪ್ರಿಯಾ ಟಿ, ಐವರ್ನಾಡು ಗ್ರಾಮದ ಲಾವಂತಡ್ಕ ಸತೀಶ್ ಮತ್ತು ಧನಲಕ್ಷ್ಮೀ ದಂಪತಿಗಳ ಪುತ್ರ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ತನ್ವಿತ್ ಎಲ್ ಎಸ್, ಪಾಲ್ತಾಡಿ ಗ್ರಾಮದ ಪುರುಷೋತ್ತಮ ಪಿ ಸಿ ಮತ್ತು ಪುಷ್ಪಾವತಿ ಕೆ ದಂಪತಿಗಳ ಪುತ್ರಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ತೀಕ್ಷಾ ಪಿ, ಆಲೆಟ್ಟಿ ಗ್ರಾಮದ ಪಡ್ಡಂಬೈಲು ಬಾಲಚಂದ್ರ ಕೆ ಮತ್ತು ವೇದಾವತಿ ಎನ್ ಕೆ ದಂಪತಿಗಳ ಪುತ್ರ ಕೋಲ್ಚಾರ್ ಸ. ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಶ್ಚಿಲ್ ಪಡ್ಡಂಬೈಲು, ದೇವಚಳ್ಳ ಗ್ರಾಮದ ತಳೂರು ಶ್ರೀಧರ ನಾಯ್ಕ್ ವಿ ಮತ್ತು ರೋಹಿಣಿ ಕೆ ದಂಪತಿಗಳ ಪುತ್ರ ದೇವಚಳ್ಳ ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕವಿನ್ ಎಸ್ ಹೆಚ್, ಆಲೆಟ್ಟಿ ಗ್ರಾಮದ ಕೋಲ್ಚಾರ್ ಪುರುಷೋತ್ತಮ್ ಕೆ ಎಸ್ ಮತ್ತು ಜಯಶ್ರೀ ಜಿ ದಂಪತಿಗಳ ಪುತ್ರ ಕೋಲ್ಚಾರ್ ಸ. ಉ. ಹಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರಜ್ಞೇಶ್ ಕೆ ಪಿ, ಸುಳ್ಯ ಕುರುಂಜಿಭಾಗ್ ಹರೀಶ್ ಕೆ ಮತ್ತು ವೀಣಾ ಕೆ ದಂಪತಿಗಳ ಪುತ್ರಿ ಕೆವಿಜಿ ಐಪಿಎಸ್ ನ ವಿದ್ಯಾರ್ಥಿನಿ ಪ್ರಣವಿ ಕೆ ಪಟೇಲ್ ಗುತ್ತಿಗಾರು ಗ್ರಾಮದ ಮುಳುಗಾಡು ಸನತ್ ಕುಮಾರ್ ಎಂ ಜಿ ಮತ್ತು ಚಂಚಲಾಕ್ಷಿ ದಂಪತಿಗಳ ಪುತ್ರ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿ ತನವ್ ಎಂ ಎಸ್, ಕೊಕ್ಕಡದ ಕೊಪ್ಪಳಕೋಡಿ ಧನಂಜಯ್ ಕೆ ಮತ್ತು ಕಾವ್ಯ ಕೆ ದಂಪತಿಗಳ ಪುತ್ರಿ ಕೊಕ್ಕಡ ಸೈoಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ತನ್ಮಯಿ ಕೆ ನವೋದಯ ವಿದ್ಯಾಲಯಕ್ಕೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ. ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದವರು ಆರರಿಂದ ಹನ್ನೆರಡನೇ ತರಗತಿಯವರೆಗೆ ಕೇಂದ್ರೀಯ ಪಠ್ಯಕ್ರಮದಲ್ಲಿ ವಸತಿಯುತ ಉಚಿತ ಶಿಕ್ಷಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಜಿಲ್ಲೆಯಿಂದ ಒಟ್ಟು 80 ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹತೆ ಪಡೆದಿದ್ದು, ಈ ಪೈಕಿ 18 ವಿದ್ಯಾರ್ಥಿಗಳು ಜ್ಞಾನದೀಪ ತರಬೇತಿ ಕೇಂದ್ರದಿಂದ ಆಯ್ಕೆಯಾಗಿದ್ದಾರೆ.
ಒಟ್ಟು 203 ವಿದ್ಯಾರ್ಥಿಗಳು ಆಯ್ಕೆ
ಪ್ರಸಕ್ತ ವರ್ಷ ಜ್ಞಾನದೀಪ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 18 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗುವ ಮೂಲಕ ಇದುವರೆಗೆ ಇಲ್ಲಿ ತರಬೇತಿ ಪಡೆದ 203 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. 2025-26ನೇ ಸಾಲಿನಲ್ಲಿ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಎ. 15 ರಿಂದ ಮೇ. 15ರವರೆಗೆ ನಡೆಯುವ ವಿಶೇಷ ಬೇಸಿಗೆ ತರಬೇತಿ ಶಿಬಿರ ಮತ್ತು ಜೂನ್ ತಿಂಗಳಿನಿಂದ ನಡೆಯುವ ತರಬೇತಿಗೆ ದಾಖಲಾತಿ ಆರಂಭಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


