ಶಿಲ್ಪ ಕೆ.ಎನ್ ಕೊಡೆಂಚಿಕಾರ್ ರವರು
ಕಾಸರಗೋಡು ಜಿಲ್ಲಾ 7ನೇ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ – 2025 ರಲ್ಲಿ ಚುಟುಕು ವಾಚಿಸಿ ಡಾ. ಎಂ.ಜಿ.ಆರ್. ಅರಸ್ ಚುಟುಕು ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ಕೆ. ನಾರಾಯಣ ಮಣಿಯಾಣಿ ಮತ್ತು ಶಶಿಕಲಾ ಬಿ ದಂಪತಿಯ ಪುತ್ರಿಯಾಗಿರುವ ಕು. ಶಿಲ್ಪ ಕೆ.ಎನ್. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ಎಂ.ಎ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿನೋಬನಗರದ ವಿವೇಕಾನಂದ ಅನುದಾನಿತ ವಿದ್ಯಾಸಂಸ್ಥೆಯ ಪೂರೈಸಿರುವ ಇವರು
ಕಳೆದ ಒಂದು ವರ್ಷದಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, 5 ಕವಿಕೋಷ್ಠಿ, ಇಪ್ಪತಕ್ಕೂ ಹೆಚ್ಚು ಆನ್ಲೈನ್ ಕವಿಗೋಷ್ಠಿ ಯಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾರೆ.


