
ಕೆವಿ ಜಿ ಕಾನೂನು ಕಾಲೇಜಿನಲ್ಲಿ ಉಪನ್ಯಾಸ ಮಾಲಿಕೆಯ ಅಂಗವಾಗಿ, ಕಾಲೇಜಿನ ಆಂತರಿಕ ಭರವಸೆಯ ಕೋಶದ ಅಡಿಯಲ್ಲಿ “ಬೌದ್ಧಿಕ ಸ್ವತ್ತು ಮತ್ತು ಹಕ್ಕುಗಳ ಅಭ್ಯಾಸ ಮತ್ತು ನಿರ್ವಹಣೆ” ಎಂಬ ವಿಷಯವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಾರ್ಚ್ 28 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲರಾದ ಡಾ. ಉದಯಕೃಷ್ಣ ಬಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮಂಗಳೂರು ಇಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಸಂತೋಷ್ ಪ್ರಭು ” ಭಾರತದಲ್ಲಿ ಹಾಗೂ ಅoತ ರಾಷ್ಟ್ರೀಯ ಮಟ್ಟದಲ್ಲಿ ಬೌದ್ಧಿಕ ಸ್ವತ್ತು ಮತ್ತು ಹಕ್ಕುಗಳ ರಕ್ಷಣೆಯ ಮಹತ್ವ ಮತ್ತು ಅದರ ಅಳವಡಿಕೆಯ ರೀತಿ”ಗಳ ಬಗ್ಗೆ ವಿಸ್ತರವಾದ ಮಾಹಿತಿ ನೀಡಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ರಚನಾ ಕೆ, ಕಾರ್ಯಕ್ರಮ ದ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ನಯನ ಪಿ ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ವಿದ್ಯಾರ್ಥಿನಿ ಕು ವೈಶಾಲಿ ದೇವರಾಜ್ ಸ್ವಾಗತಿಸಿ, ಕು ಸಾಂದ್ರ ಎ ವಿ ವಂದಿಸಿದರು. ಕು ನಂದನ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಭೋದಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.