ರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ-ಬಹುಮಾನ ವಿತರಣೆ

ನಾಗಶ್ರೀ ಪ್ರೆಂಡ್ಸ್ ಸುಳ್ಯ ವತಿಯಿಂದ ರಾಜ್ಯಮಟ್ಟದ ಮಹಿಳೆಯರ ಮುಕ್ತ ಹಾಗೂ ಪುರುಷರ 525ಕೆ.ಜಿ. ಲೆವೆಲ್ ಮಾದರಿಯ ಹಗ್ಗಜಗ್ಗಾಟ ಹಾಗೂ ಮಹಿಳೆಯರ ಸುಳ್ಯ & ಕಡಬ ತಾಲೂಕಿನ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಮಾ.23 ರಂದು ರಂದು ಸಂಜೆ ಪ್ರಭು ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗಶ್ರೀ ಫ್ರೆಂಡ್ಸ್ ಸುಳ್ಯ ಇದರ ಉಪಾಧ್ಯಕ್ಷೆ ಶ್ರೀಮತಿ ಮಮತಾ ಯು.ಡಿ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಅಶೋಕ್ ಪ್ರಭು, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷ ಸದಾನಂದ ಮಾವಾಜಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಶ್ರೀ ಕಿನ್ನಿಮಾನಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು ಇದರ ಆಡಳಿತ ಮೊಕ್ತೇಸರರಾದ ಎನ್.ಎಸ್. ಬಾಲಕೃಷ್ಣ ಗೌಡ , ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ, ಸ್ಥಾಯಿ ಸಮಿತಿ ನಗರ ಪಂಚಾಯತ್ ಸುಳ್ಯ ಇದರ ಅಧ್ಯಕ್ಷೆ ಕಿಶೋರಿ ಶೇಟ್, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಉದ್ಯಮಿ, pwd ಗುತ್ತಿಗೆದಾರರು ರಾಜೇಶ್ ಕಿರಿಭಾಗ ಹಾಗೂ ಕ್ರೀಡಾಕೂಟದ ನಗದು ದಾನಿಗಳು ಮತ್ತು ಫಲಕದಾನಿಗಳು ಉಪಸ್ಥಿರಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳಾದ ವಿನಯ್ ನಾರಾಲು ಹಾಗೂ ಖ್ಯಾತ ರಾಷ್ಟçಮಟ್ಟದ ನಿರೂಪಕರಾದ ಸುರೇಶ್ ಪಡಿಪಂಡ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.



ಪುರುಷರ ಹಗ್ಗಜಗ್ಗಾಟ-ಜಟಾಯು ವಿಟ್ಲ ಪ್ರಥಮ, ಶಿವಶಕ್ತಿ ಶಿವಾಜಿನಗರ ಮಂಡೆಕೋಲು ದ್ವಿತೀಯ, ನ್ಯೂ ಪ್ರೆಂಡ್ಸ್ ಬೊಮ್ಮಾರ್ ಮರ್ಕಂಜ ತೃತೀಯ, ಎಸ್‌ಎಮ್‌ಡಿ ಮಾಡಿವಾಲಮೂಲೆ ಚತುರ್ಥ, ಮಹಿಳೆಯರ ಹಗ್ಗಜಗ್ಗಾಟ ಶೆಟ್ಟಿ ಫ್ರೆಂಡ್ಸ್ ಬಂಟ್ವಾಳ ಪ್ರಥಮ, ಕುಂಜತ್ತೂರು ತಂಡ ದ್ವಿತೀಯ, ಶ್ರೀ ಪ್ರಂಡ್ಸ್ ತೃತೀಯ, ಉಡುಪಿ ಪ್ರೆಂಡ್ಸ್ ಚತುರ್ಥ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಮುತ್ತುಶ್ರೀ ಫ್ರೆಂಡ್ಸ್ ಪ್ರಥಮ ಹಾಗೂ ಎನ್ ಎಂ ಪಿ ಯು ಅರಂತೋಡು ದ್ವಿತೀಯ, ಮಯೂರ ಪ್ರೆಂಡ್ಸ್ ಕೊಲ್ಲಮೊಗ್ರ ತೃತೀಯ, ಮೊಗ್ರ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಇವರಿಗೆ ನಗದು ಬಹುಮಾನ ಹಾಗೂ ಫಲಕ ನೀಡಿ ಗೌರವಿಸಲಾಯಿತು.













ಪುರುಷರ ಹಗ್ಗ ಜಗ್ಗಾಟದಲ್ಲಿ ಒಟ್ಟು 18 ತಂಡ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಒಟ್ಟು 14 ತಂಡ ಹಾಗೂ ತ್ರೋಬಾಲ್ ನಲ್ಲಿ 15 ತಂಡಗಳು ರಾಜ್ಯದ ಬೇರೆ ಬೇರೆ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.