ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ, ಸಾಹಿತಿ ಡಾ. ಶಂಕರನಾರಾಯಣ ಉಡುಪ ರವರ ಸಂಶೋಧನ ಕೃತಿ ” ಕಡಬ ತಾಲೂಕಿನ ಶಾಸನಗಳು ” ಇತ್ತೀಚೆಗೆ ನಡೆದ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು.



ಈ ಕೃತಿಯು ಕಡಬ ಪ್ರದೇಶದಲ್ಲಿನ ಪ್ರಕಟಿತ ಮತ್ತು ಪತ್ತೆಯಾದ ಹೊಸ ಶಾಸನಗಳ ಮಾಹಿತಿಗಳನ್ನು ಒಳಗೊಂಡಿದೆಯಲ್ಲದೆ, ಹಲವು ಮೂಲದ ಆಕರಗಳನ್ನು ಇಟ್ಟುಕೊಂಡು ಕಡಬ ತಾಲೂಕಿನ ಸಂಕ್ಷಿಪ್ತ ಇತಿಹಾಸವನ್ನು ತಿಳಿಸುಕೊಡುವ ಪ್ರಯತ್ನವನ್ನೂ ಮಾಡಲಾಗಿದೆ.