ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಅಂಗೀಕೃತವಾದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್‌ರೈಟಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ದಿನಗಳ ವಿಶೇಷ ಬೇಸಿಗೆ ಶಿಬಿರವನ್ನು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆಯೋಜಿಸಲಾಗಿದೆ.
ಶಿಬಿರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸರಕಾರಿ/ಖಾಸಗಿ ಉದ್ಯೋಗಸ್ಥರು ಕೂಡ ಭಾಗವಹಿಸಬಹುದಾಗಿದೆ. ಈ ಶಿಬಿರದಲ್ಲಿ ಒಂದು ತಿಂಗಳ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ನ ಯಾವುದೇ ಕೋರ್ಸುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯಬಹುದಾಗಿದೆ.
ಹಾಗೆಯೇ ಸಂಸ್ಥೆಯಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ಪರೀಕ್ಷೆಯನ್ನು ನಡೆಸುತ್ತಿದ್ದು, ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯು ಪ್ರತಿ 6 ತಿಂಗಳಿಗೊಮ್ಮೆ ವಿತರಣೆಯಾಗುತ್ತದೆ. ಸರಕಾರಿ ಉದ್ಯೋಗ ಪಡೆಯುವ ಅಭ್ಯರ್ಥಿಗಳಿಗೆ ಈ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಯ ಅವಶ್ಯಕತೆಯಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.



ಪೋಷಕರೇ ವಿದ್ಯಾರ್ಥಿಗಳು ರಜಾ ದಿನಗಳನ್ನು ವ್ಯರ್ಥ ಮಾಡದೆ ಈ ಅವಕಾಶವನ್ನು ಉಪಯೋಗಪಡಿಸಿಕೊಂಡಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಈ ಅವಕಾಶವನ್ನುಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಸಂಸ್ಥೆಯಿಂದ ಒದಗಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮೊ: 9900909648, 8792420118 ಕರೆ ಮಾಡುವಂತೆ ವಿನಂತಿಸಲಾಗಿದೆ.