ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮದ ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ನಿತ್ಯಾನಂದ ಎಂ.ಕೆ. ಮಾ. 31 ರಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಬಂದಡ್ಕ ಗ್ರಾಮದ ಮಕ್ಕಟ್ಟಿ ದಿ. ಕುಶಾಲಪ್ಪ ಹಾಗೂ ಕಮಲಾ ದಂಪತಿಗಳ ಹಿರಿಯ ಪುತ್ರನಾಗಿರುವ ಇವರು, ತನ್ನ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಸುಳ್ಯದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಬಳಿಕ ಕಾಸರಗೋಡಿನ ಮಾಯಿಪ್ಪಾಡಿಯ ಡಯಟ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಡಿ.ಎಡ್ ತರಬೇತಿ ಪೂರೈಸಿದರು. ಆ ಬಳಿಕ ಮಾಣಿಮೂಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲ ತಿಂಗಳುಗಳ ಕಾಲ ಗೌರವ ಶಿಕ್ಷಕಿಯಾಗಿ ದುಡಿದ ಬಳಿಕ 1995 ನೇ ಇಸವಿಯಲ್ಲಿ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕರಾಗಿ ಸರಕಾರಿ ಸೇವೆಗೆ ನಿಯುಕ್ತಿಕೊಂಡರು. ಸುದೀರ್ಘ 30 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಮಾ. 31ರಂದು ಸರಕಾರಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿದ್ದಾರೆ.
ಇವರ ಪತ್ನಿ ಶ್ರೀಮತಿ ಮಧುಲಿಕಾ ರವರು ಗೃಹಿಣಿಯಾಗಿದ್ದು ಹಿರಿಯ ಪುತ್ರಿ ನಿಹಾರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಡ್ ತರಬೇತಿಯನ್ನು ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪುತ್ರಿ ತುಷಾರ ಸರಕಾರಿ ಬಂದಡ್ಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.



ನಿತ್ಯಾನಂದ ರವರು ಬಂದಡ್ಕ ಗಡಿನಾಡ ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ, ಮಕ್ಕಟ್ಟಿ ತರವಾಡು ದೈವಸ್ಥಾನದ ನಿರ್ಮಾಣ ಸಮಿತಿಯ ಕಾರ್ಯದರ್ಶಿಯಾಗಿಯೂ ದುಡಿಯುತ್ತಿದ್ದು, ಪ್ರಗತಿಪರ ಕೃಷಿಕರಾಗಿದ್ದಾರೆ.