ನೆಲ್ಲೂರು ಕೆಮ್ರಾಜೆ ಗ್ರಾಮದ ಕಿಲಾರ್ಕಜೆ ಪ್ರದ್ಯುಮ್ನ ಯು.ವಿ. ಇವರು ೨೦೨೪ನೇ ಸಾಲಿನಲ್ಲಿ ಯು.ಪಿ.ಯಸ್.ಸಿ.-೧೧ ನಡೆಸಿದ ಸಿ.ಡಿ.ಎಸ್ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಯಸ್.ಯಸ್.ಬಿ. ಸಂದರ್ಶನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ೧೪ನೇ ರ್‍ಯಾಂಕ್ ಪಡೆದು ಭಾರತೀಯ ನೌಕಾಸೇನಾ ಅಕಾಡೆಮಿಗೆ ಆಯ್ಕೆ ಆಗಿದ್ದಾರೆ.
ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಾಗೂ ಪದವಿಪೂರ್ವ ವಿದ್ಯಾಭ್ಯಾಸವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಪೂರೈಸಿ ನಂತರ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗದ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.



ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟದ ಕಿಲಾರ್ಕಜೆ ಅನಿತಾ -ವೇದಮೂರ್ತಿ ದಂಪತಿಗಳ ಪುತ್ರ. ಹಾಗೂ ಕಿಲಾರ್ಕಜೆ ದಿ. ರಾಧಾಕೃಷ್ಣ ಭಟ್ -ದೇವಕಿ ದಂಪತಿಗಳ ಮೊಮ್ಮಗ.