ನೆಟ್ಟಾರು: ಆಸರೆ ಕ್ರೀಡಾ ಸಂಘ ಮತ್ತು ಸಾಂಸ್ಕೃತಿಕ ಸಂಘ ರಚನೆ

0

ಸಮಾಜ ಮುಖೇನ ಸಮಾಜ ಸೇವೆಗೆ ಮತ್ತು ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೆಟ್ಟಾರಿನಲ್ಲಿ ಆಸರೆ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಮಾ. 30 ರಂದು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಕೆ.ಎಸ್.ಲೋಕೇಶ್ ಪೂಜಾರಿ ನೆಟ್ಟಾರು, ಅಧ್ಯಕ್ಷರಾಗಿ ಚಂದ್ರಶೇಖರ ಚಾವಡಿಬಾಗಿಲು ನೆಟ್ಟಾರು, ಉಪಾಧ್ಯಕ್ಷ ಪ್ರಕಾಶ್ ಚಾವಡಿ ಬಾಗಿಲು, ಕಾರ್ಯದರ್ಶಿ ಪ್ರತೀಕ್ ಮೊಗಪ್ಪೆ, ಜತೆ ಕಾರ್ಯದರ್ಶಿ ನಿಖಿಲ್ ಪೆರುವಾಜೆ.‌ ಕೋಶಾಧಿಕಾರಿ ಹರೀಶ್ ಬೊಳಿಯಮೂಲೆ, ಕ್ರೀಡಾಕಾರ್ಯದರ್ಶಿ ವಸಂತ ಕೊಲಂಬಳ, ಜೊತೆ ಕ್ರೀಡಾ ಕಾರ್ಯದರ್ಶಿ ಅವಿನಾಶ್ ಮಣಿಕ್ಕಾರ, ಸಾಂಸ್ಕ್ರತಿಕ ಕಾರ್ಯದರ್ಶಿ ಸಂಪತ್ ಪರನೀರು ಪುತ್ತೂರು, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಉಮೇಶ್ ಕೋಡಿಮನೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ವಸಂತ(ವಾಸು) ಕುಲಾಲ್ ನೆಟ್ಟಾರು, ಚಂದ್ರಶೇಖರ ಪರನೀರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೀತಾರಾಮ ಕುಲಾಲ್ ನೆಟ್ಟಾರು, ರಾಜೇಶ್ ಕಜೆ, ಜಗನ್ನಾಥ ಕುಲಾಲ್ ಕೊಲಂಬಳ, ಸತ್ಯನಾರಾಯಣ ಮಣಿಕ್ಕಾರ, ಪ್ರಭಾಕರ ನೆಟ್ಟಾರು, ನಿತಿನ್ ನೆಟ್ಟಾರು, ಪದ್ಮನಾಭ ಚಾವಡಿಬಾಗಿಲು ಆಯ್ಕೆಯಾದರು.

ಚಂದ್ರಶೇಖರ್ ಚಾವಡಿಬಾಗಿಲು ಸಭೆಯನ್ನು ನಿರೂಪಿಸಿ ಸಂಘದ ಬಗ್ಗೆ ವಿವರಿಸಿ, ಸ್ವಾಗತಿಸಿದರು. ಪ್ರತೀಕ್ ಮೊಗಪ್ಪೆ ವಂದಿಸಿದರು.