ಕೆ.ಆರ್. ವಿದ್ಯಾಧರ ಅವರಿಗೆ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯವು ಎ. 04 ರಂದು ನಡೆದ ನುಡಿಹಬ್ಬ ಘಟಿಕೋತ್ಸವದಲ್ಲಿ ಡಿ.ಲಿಟ್. ಪದವಿಯನ್ನು ಪ್ರದಾನ ಮಾಡಿದೆ. 2025ರ ಸಾಲಿನಲ್ಲಿ ವಿಶ್ವವಿದ್ಯಾಲಯವು 7 ವಿದ್ವಾಂಸರಿಗೆ ಡಿ.ಲಿಟ್ ನೀಡಿದ್ದು ಕೆ.ಆರ್. ವಿದ್ಯಾಧರರ “1837ರ ಅಮರ ಸುಳ್ಯ ಹೋರಾಟ: ಬಹುನಾಯಕತ್ವದ ಅಧ್ಯಯನ” ಎಂಬ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಈ ಗೌರವ ಪ್ರಾಪ್ತವಾಗಿದೆ.
ಹಾಲೇರಿ ಆಡಳಿತದ ಅಂತಿಮ ಹಂತ ಹಾಗೂ ಬ್ರಿಟಿಷರ ಒಳ ನುಸುಳುವಿಕೆಯ ಸಮಯದ ಅವಿಭಜಿತ ಕೊಡಗಿನ ರಾಜಕೀಯ ತುಮುಲ, ಜಾತಿ ಧ್ರುವೀಕರಣ ಮತ್ತು ಸಾಮುದಾಯಿಕ ಸಂಘರ್ಷದ ಚರಿತ್ರೆಯ ವಿಶ್ಲೇಷಣೆ ಈ ಅಧ್ಯಯನದಲ್ಲಿದೆ.