ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಮುದರ್ರಿಸರಾಗಿ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ರವರ ನೇಮಕ

0

ಮೊಗರ್ಪಣೆ ಮುಹಿಯ್ಯದ್ದೀನ್ ಜುಮ್ಮಾ ಮಸ್ಜಿದ್ ಇದರ ನೂತನ ಮುದರ್ರಿಸರಾಗಿ ಹಿರಿಯ ವಿದ್ವಾಂಸ ಖ್ಯಾತ ವಾಗ್ಮಿ ಅಬ್ದುಲ್ ಖಾದರ್ ಸಖಾಫಿ ಆಲ್ ಖಾಮಿಲ್ ಮುದುಗಡ ಇವರನ್ನು ನೇಮಕ ಮಾಡಲಾಗಿದೆ.

ಕಳೆದ ಸುಮಾರು 4 ವರ್ಷಗಳಿಂದ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿದ್ದ ಹಾಫಿಲ್ ಶೌಖತ್ ಅಲಿ ಸಖಾಫಿ ರವರ ನಿರ್ಗಮನದ ಬಳಿಕ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯು ಅಬ್ದುಲ್ ಖಾದರ್ ಸಖಾಫಿ ಮುದುಗಡ ರವರನ್ನು ನೂತನ ಮುದರ್ರಿಸರಾಗಿ ನೇಮಕ ಗೊಳಿಸಿದೆ.

ಇವರು 1992ರಲ್ಲಿ ಸಖಾಫಿ ಬಿರುದನ್ನು ಪಡೆದಿದ್ದು 1993ರಲ್ಲಿ ಅಲ್ ಖಾಮಿಲ್ ಬಿರುದನ್ನು ಪಡೆದುಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಮಸೀದಿಗಳಲ್ಲಿ ಖತೀಬರಾಗಿ ಹಾಗೂ ಮದರ್ರಿಸರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

ಇವರು ಹಿರಿಯ ವಿದ್ವಾಂಸ ಹಾಗೂ ಖ್ಯಾತ ವಾಗ್ಮಿಯು ಕೂಡ ಆಗಿದ್ದು ಏ 4 ರಂದು ಶುಕ್ರವಾರದ ಜುಮಾ ಖುತುಬಾ ನೆರವೇರಿಸುವ ಮೂಲಕ ಮೊಗರ್ಪಣೆ ಯಲ್ಲಿ ತಮ್ಮ ಕರ್ತವ್ಯಕ್ಕೆ ಹಾಜರಾದರು.