ಪಂಜದಿಂದ ಜಳಕದಹೊಳೆ ಬಳ್ಳಕ್ಕ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಜಳಕದಹೊಳೆ ಸೇತುವೆ ಶಿಥಿಲ ಗೊಂಡಿದ್ದು ಅದರ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸೇತುವೆ ಸಮೀಪ ಹೊಳೆಗೆ ಮಣ್ಣು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಎ.5 ರಂದು ಸಂಜೆ ಸುರಿದ ಭಾರಿ ಮಳೆಯಿಂದ ಹೊಳೆಯಲ್ಲಿ ನೀರು ಬಂದು ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿತ್ತು. ಎ.6 ರಂದು ಮುಂಜಾನೆ ಹೊಳೆ ನೀರು ಹರಿಯಲು ಪೈಪ್ ಅಳವಡಿಸಿ ರಸ್ತೆ ನಿರ್ಮಾಣ ಕಾರ್ಯ ನಡೆದು ಮತ್ತೆ ವಾಹನ ಸಂಚಾರ ಆರಂಭ ಗೊಂಡಿತು.
ಸುಮಾರು 50 ಲಕ್ಷ ವೆಚ್ಚದಲ್ಲಿ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು , ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಸೇತುವೆ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಸೇತುವೆಯ ಕೆಳಗೆ ಪಿಲರ್, ಮೇಲಿನ ದುರಸ್ಥಿ ಕಾರ್ಯಗಳು ನಡೆದಿದೆ. ಸೇತುವೆಯ ಪಿಲರ್ ಗೆ ಬೀಮ್ ಜೋಡಣೆ, ಕಾಂಕ್ರೀಟ್ ನಡೆದು. ಇನ್ನು ಸುಮಾರು 15 ದಿನಗಳಲ್ಲಿ ಕಾಮಗಾರಿ ಪೂರ್ಣಗಳ್ಳಲಿದೆ. ಆ ಮೊದಲು ತಾತ್ಕಾಲಿಕ ರಸ್ತೆ ಕಡಿತ ಗೊಂಡರೆ ಸರಿ ಪಡಿಸಿ ಕೊಡುತ್ತೇವೆ ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ.